ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗ ಬಳಿ ಲಾರಿ ಉರುಳಿ 8 ಮಂದಿ ಕಾರ್ಮಿಕರ ಸಾವು

By Staff
|
Google Oneindia Kannada News

ಗುಲ್ಬರ್ಗ : ರಸ್ತೆ ತಿರುವಿನಲ್ಲಿ ಲಾರಿಯಾಂದು ಉರುಳಿದ ಪರಿಣಾಮ ಮೂವರು ಮಕ್ಕಳು, ನಾಲ್ವರು ಮಹಿಳೆಯರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ ಘಟನೆ ಗುರುವಾರ ಸಂಭವಿಸಿದೆ.

ಮಹಾರಾಷ್ಟ್ರ ಗಡಿಪ್ರದೇಶದಲ್ಲಿರುವ ವಾಘ್ದಾರಿ ಹಳ್ಳಿಯಲ್ಲಿ ಅಪಘಾತ ಸಂಭವಿಸಿದೆ. ಪುಣೆಗೆ ಹೋಗುತ್ತಿದ್ದ ಈ ಸಿಮೆಂಟ್‌ ತುಂಬಿದ ನತದೃಷ್ಟ ಲಾರಿಯಲ್ಲಿ, 20ಮಂದಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು.

ಮೃತರನ್ನು ವೆಂಕಮ್ಮ(3), ರಾಚಮ್ಮ(7), ರೇಣುಕಾ(19), ಲಕ್ಷ್ಮಿಬಾಯಿ(30), ದೇವಕಮ್ಮ(40), ಅಲ್ಲಮ್ಮನ್ಮಮ್ಮ(25), ಭೀಮಣ್ಣ ಎಂದು ಗುರ್ತಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X