• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಭಾನುವಾರ ಐಟಿ ಕನ್ನಡಿಗರಿಂದ ಕಾವೇರಿ ಹೋರಾಟ

By Staff
|

IT Kannadigas join Cauvery agitationಬೆಂಗಳೂರು : ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿರುವುದರ ವಿರುದ್ಧ ಪ್ರತಿಭಟನೆ ಕಾವೇರುತ್ತಿದೆ. ಹೋರಾಟ ನಡೆಸುತ್ತಿರುವ ವಿವಿಧ ಸಂಘಟನೆಗಳ ಸಾಲಿಗೆ, ಇದೀಗ ಬೆಂಗಳೂರು ಐಟಿ ಕನ್ನಡಿಗರು ಸೇರಿಕೊಳ್ಳುತ್ತಿದ್ದಾರೆ.

ಬೆಂಗಳೂರು ಸಿಲಿಕಾನ್‌ ಕಣಿವೆಯಲ್ಲಿ ಚಿಕ್ಕ-ಪುಟ್ಟ-ದೊಡ್ಡ-ಅಗಾಧವಾಗಿರುವ ಅನೇಕ ಕಂಪನಿಗಳಿವೆ. ಆ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ಕನ್ನಡಿಗರು ಸಂಘಟಿತರಾಗುತ್ತಿದ್ದು , ಕಾವೇರಿ ನೀರಿಗಾಗಿ ಹೋರಾಡಲು ಸಜ್ಜಾಗುತ್ತಿದ್ದಾರೆ. ‘ರಾಜ್ಯಮಟ್ಟದಲ್ಲಿ ನೆಲೆಕಂಡುಕೊಂಡಿರುವ ನಾವು(ಐಟಿ ಕನ್ನಡಿಗರು) ನಾಡ ರೈತರ ಹಿತಕ್ಕಾಗಿ, ಕಾವೇರಿ ನ್ಯಾಯಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧ ‘ ಎಂದು ಐಟಿ ಕನ್ನಡಿಗರ ಕೂಟ ಹೇಳಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಕನ್ನಡಿಗರೆಲ್ಲ ಕಲೆತು ಕಟ್ಟಿರುವ ಸಂಘದ ಇ-ವಿಳಾಸ ಇಂತಿದೆ : IT_kannadigara_koota@yahoo.com

ಪ್ರತಿಭಟನೆ : ಐಟಿ ಕನ್ನಡಿಗರ ಸಂಘವು ಇದೇ ಭಾನುವಾರ(ಫೆ.18) ಬೆಳಗ್ಗೆ 09.30ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದೆ. ಮಹಾತ್ಮ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆ ಬಳಿಯಿಂದ ಮೆರವಣಿಗೆ ಆರಂಭವಾಗಿ, ರಾಜಭವನದಲ್ಲಿ ಕೊನೆಗೊಳ್ಳುತ್ತದೆ. ರಾಜ್ಯಪಾಲರಿಗೆ ಐಟಿ ಕನ್ನಡಿಗರು ತಮ್ಮ ಕಳವಳ ಹೇಳಿಕೊಂಡು ದೂರು ದಾಖಲಿಸುತ್ತಾರೆ.

ಐಟಿ ಕ್ಷೇತ್ರದಲ್ಲಿ ಇರುವ ಎಲ್ಲ ಕನ್ನಡಿಗರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘದ ಮುಂದಾಳುಗಳು ವಿನಂತಿಸಿದ್ದಾರೆ. ತಮ್ಮ ತಮ್ಮ ಕಂಪನಿಗಳಲ್ಲಿರುವ ಕನ್ನಡಿಗರನ್ನು, ಆ ಕಂಪನಿಯ ಮುಖ್ಯಸ್ಥರನ್ನು ಪ್ರತಿಭಟನೆಗೆ ಆಹ್ವಾನಿಸಿ ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

 • ಪ್ರಶಾಂತ ಡಿ.ಎನ್‌(99005 04232)
 • ಮುಕುಂದ(98867 18405)
 • ಪ್ರವೀಣ(99002 11581)
 • ಭರತ ಎಸ್‌.ಬಿ(98805 78171)
 • ವೇದಮೂರ್ತಿ ಎ.ಎಲ್‌(98865 69454)
 • ರಘುನಾಥ(98860 80843)
 • ಸುರೇಶ್‌ ವಾಘ್ಮೋರೆ(98803 56160)
 • ಶ್ರೀನಾಥ್‌(98455 75964)
 • ರಮೇಶ್‌(98809 91556)
 • ಶಿವ(94493 41843)

( ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X