ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳಿಗೆ ಪಾಠ ಕಲಿಸಲು ಶಿವಸೈನಿಕರ ಬೆತ್ತದ ಪೂಜೆ!

By Staff
|
Google Oneindia Kannada News

ಆಗ್ರಾ : ಪ್ರೇಮಿಗಳ ದಿನಾಚರಣೆ(ವ್ಯಾಲಂಟೈನ್ಸ್‌ ಡೇ) ಖಂಡಿಸಿ ಶಿವಸೈನಿಕರು ನಗರದಲ್ಲಿ ಬುಧವಾರ ಬೆತ್ತದ ಪೂಜೆ ನಡೆಸಿದರು.

ದೇಶದಲ್ಲಿ ಆಚರಿಸಲಾಗುತ್ತಿರುವ ಪ್ರೇಮಿಗಳ ದಿನಾಚರಣೆ, ಭಾರತೀಯ ಸಮಾಜ ದಿನೇದಿನೇ ಪಾಶ್ಚಾತ್ಯ ಪ್ರಭಾವಕ್ಕೊಳಗಾಗುತ್ತಿರುವುದರ ಸಂಕೇತ ಎಂದು ಖಂಡಿಸಿರುವ ಶಿವಸೇನಾ, ಸೇಂಟ್‌ ಜೋನ್ಸ್‌ ವೃತ್ತದ ಬಳಿಯಿರುವ ಹನುಮಾನ್‌ ದೇವಸ್ಥಾನದಲ್ಲಿ ಬೆತ್ತದ ಪೂಜೆ ನಡೆಸಿತು. ನಗರದಲ್ಲಿರುವ ಲೈಲಾ-ಮಜ್ನುಗಳಿಗೆ ಪಾಠ ಕಲಿಸಲು ಶಿವಸೇನೆ ಈ ಪೂಜೆ ನಡೆಸಿತು.

ಶಿವಸೇನೆ ಕೋಪಕ್ಕೆ ಗುರಿಯಾದರೂ, ಪ್ರೇಮಿಗಳು ಕಣ್ಣಾಮುಚ್ಚಾಲೆ ಆಟವಾಡಿದಂತೆ ತಂಡೋಪತಂಡವಾಗಿ ತಾಜ್‌ ಮಹಲ್‌ಗೆ ಭೇಟಿ ನೀಡಿ ಪರಸ್ಪರ ಪ್ರೇಮ ವಿನಿಮಯ ಮಾಡಿಕೊಂಡರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X