ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ಗದ ಬೆಲೆಗೆ ಕನ್ನಡ ಸಿನಿಮಾಗಳ ಅಸಲಿ ವಿ.ಸಿ.ಡಿ ಬೇಕಾ?

By Staff
|
Google Oneindia Kannada News

ಬೆಂಗಳೂರು : ಮೌಸರ್‌ ಬೇರ್‌ ಸಂಸ್ಥೆಯು ಇತ್ತೀಚೆಗೆ 101 ಕನ್ನಡ ಚಲನಚಿತ್ರಗಳ ಸಿ.ಡಿ.ಗಳನ್ನು ಅಗ್ಗದ ದರದಲ್ಲಿ ಮಾರುಕಟ್ಟೆಗೆ ಬಿಟ್ಟಿದೆ.

ಸುಮಾರು 600ಕ್ಕೂ ಅಧಿಕ ಚಿತ್ರಗಳ ಹಕ್ಕುಗಳನ್ನು ಹೊಂದಿರುವ ಸಂಸ್ಥೆ , ಈಗ ‘ಮಲ್ಲ’, ‘ಅಹಂ ಪ್ರೇಮಾಸ್ಮಿ’ ಸೇರಿದಂತೆ 101 ಜನಪ್ರಿಯ ಕನ್ನಡ ಚಿತ್ರಗಳ ಸಿ.ಡಿ.ಗಳನ್ನು ಹೊರತಂದಿದೆ. ಅವುಗಳಲ್ಲಿ 18 ಡಿ.ವಿ.ಡಿ ರೂಪದಲ್ಲಿದೆ.

ವಿ.ಸಿ.ಡಿ.ಗಳ ಬೆಲೆ ಕೇವಲ 28ರಿಂದ 34ರೂಪಾಯಿಗಳು ಮಾತ್ರ. ಕಡಿಮೆ ಬೆಲೆಗೆ ಸಿ.ಡಿ.ಗಳನ್ನು ನೀಡಿ ಪೈರಸಿ ತಡೆಯುವುದು ಸಂಸ್ಥೆಯ ಉದ್ದೇಶ. ಕರ್ನಾಟಕದಲ್ಲಿ 40ಕ್ಕೂ ಅಧಿಕ ಹಂಚಿಕೆದಾರರಿದ್ದು, ಸದ್ಯದಲ್ಲಿಯೇ ಹಿಂದಿ ಚಿತ್ರಗಳನ್ನು ಸಿ.ಡಿ.ರೂಪದಲ್ಲಿ ಹೊರತರಲು ಸಂಸ್ಥೆ ಸಿದ್ಥತೆ ನಡೆಸಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X