ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ‘ಬುದ್ಧಿಜೀವಿಗಳ ಸಂಘ’ಕ್ಕೀಗ 22ರ ಹರಯ!

By Staff
|
Google Oneindia Kannada News

ಮೈಸೂರು : ಗ್ರಾಮಾಂತರ ಬುದ್ಧಿಜೀವಿಗಳ ಸಂಘ ತನ್ನ 22ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಸಾಹಿತ್ಯೋತ್ಸವವನ್ನು ಫೆಬ್ರವರಿ 18ರಂದು ಹಮ್ಮಿಕೊಂಡಿದೆ.

ಪುರಭವನದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಕೆ.ಬಿ.ಮಿಲನ ಅವರ ‘ರಾಷ್ಟ್ರಕವಿ ಕುವೆಂಪು ಒಂದು ನೆನಪು’ ಹಾಗೂ ‘ಭಾವ ಲಹರಿ’ , ಪದ್ಮಾ ವಿಶ್ವೇಶ್ವರಯ್ಯ ಬರೆದಿರುವ ‘ಸುವರ್ಣ ಕರ್ನಾಟಕ’ ಹಾಗೂ ಕೋಲ ರಂಗನಾಥ್‌ರಾವ್‌ ಅವರ ‘ಮಹಿಳೆ’ ಪುಸ್ತಕಗಳು ಬಿಡುಗಡೆಯಾಗಲಿವೆ.

ಮಳಲಿ ವಸಂತ ಕುಮಾರ್‌, ಭೂಗರ್ಭ ಶಾಸ್ತ್ರಜ್ಞ ಎನ್‌.ಎನ್‌. ರಾಮೇಗೌಡ ಮತ್ತು ಅಂಕಣಕಾರ ಗೊರೂರು ಬಿ. ಅನಂತರಾಜು ಅವರಿಗೆ ಸಾಹಿತ್ಯ ರತ್ನ ಮತ್ತು ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವಿವಿಧ ರಂಗದಲ್ಲಿ ಸಾಧನೆಗೈದ 21 ಗಣ್ಯರನ್ನು ಸನ್ಮಾನಿಸಲಾಗುವುದು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಕ್ತದಾನ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಲೇಖಕಿ ಲತಾ ರಾಜಶೇಖರ್‌, ಹೆಚ್‌. ಎಸ್‌. ಕೃಷ್ಣ ಸ್ವಾಮಿ ಅಯ್ಯಂಗಾರ್‌, ಸಿ. ಪಿ. ಕೃಷ್ಣ ಕುಮಾರ್‌, ಮಂಗಳಾ ಸತ್ಯನ್‌ ಮತ್ತು ಮಳಲಿ ವಸಂತಕುಮಾರ್‌ ಈ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X