• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲರಿಂದ, ಎಲ್ಲರಿಗೋಸ್ಕರ, ಎಲ್ಲರಿಗಾಗಿ ಎಲ್ಲವೂ ಬಂದ್‌!

By Staff
|
  • ನಮ್ಮ ವರದಿಗಾರರಿಂದ
  • Karnataka Rakshana Vedike members made real impact on Karnataka Bandhಬೆಂಗಳೂರು : ಕಾವೇರಿ ಹೋರಾಟ ಅಂದರೆ; ಗಲಭೆ, ಬೆಂಕಿ, ಗುಂಡು, ದೊಂಬಿ, ರಕ್ತಪಾತ, ಆಸ್ತಿಪಾಸ್ತಿ ನಷ್ಟ ಎನ್ನುವ ನಂಬಿಕೆ ಈ ಸಲ ಸುಳ್ಳಾಯಿತು!

    ಕೆಲವೇ ಕೆಲವು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಸೋಮವಾರದ ಕರ್ನಾಟಕ ಬಂದ್‌ ಶಾಂತಿಯುತವಾಗಿತ್ತು. ಜೊತೆಗೆ ಶೇ.100ರಷ್ಟು ಯಶಸ್ಸು ಸಾಧಿಸಿದೆ.

    ನೀರಿಗಾಗಿ ನಡೆಯುತ್ತಿರುವ ಈ ಕದನದಲ್ಲಿ ಕರ್ನಾಟಕ ತನ್ನ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸಿದೆ... ದಿಲ್ಲಿ ದೊರೆಗಳಿಗೆ ಎಚ್ಚರಿಕೆ ರವಾನಿಸಿದೆ... ಅನ್ಯಾಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ...

    ಕರ್ನಾಟಕ ಬಂದ್‌ ಎಲ್ಲೆಲ್ಲಿ ಹೇಗಿತ್ತು?

    • ಕಾವೇರಿ ಬಗ್ಗೆ ಎಂದಿನಂತೆ ಕರಾವಳಿ ಜಿಲ್ಲೆಗಳು ತಮ್ಮ ಪಾಡಿಗೆ ತಾವಿದ್ದರೂ, ಉದಾಸೀನವನ್ನು ಪ್ರದರ್ಶಿಸಿಲ್ಲ.
    • ಬೀದರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ
    • ಕಾವೇರಿ ಕಣಿವೆಯ ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯದಲ್ಲಿ ಕಾವೇರಿ ಬಂದ್‌ ಪರಿಣಾಮ ಎಲ್ಲವೂ ಬಂದ್‌! ದ್ವಿಚಕ್ರವಾಹನಗಳಿಗೆ ಬೆಂಕಿ, ಕಲ್ಲು ತೂರಾಟ, ಪೆಟ್ರೋಲ್‌ ಬಂಕ್‌ಗೆ ಕಲ್ಲುತೂರಾಟ ಸೇರಿದಂತೆ ಕೆಲವು ಘಟನೆಗಳು ಮೈಸೂರಿನಲ್ಲಿ ನಡೆದಿದ್ದರೂ, ಪರಿಸ್ಥಿತಿ ಶಾಂತವಾಗಿಯೇ ಇತ್ತು.
    • ಕುಂದಾಪುರದಲ್ಲಿ ಸಂಪೂರ್ಣ ಬಂದ್‌
    • ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯ ಮೂಲಕ, ಕಾವೇರಿಗಾಗಿ ಧ್ವನಿ ಎತ್ತಿದ್ದಾರೆ.
    • ಬಳ್ಳಾರಿ, ಬಿಜಾಪುರ, ಗದಗ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ರಸ್ತೆ ತಡೆ, ರೈಲು ತಡೆಗಳು.
    • ಐಟಿ-ಬಿಟಿ ಕಂಪನಿಗಳಿಗಿಂದು ರಜೆ... ಚಿತ್ರಮಂದಿರಗಳು ಬಂದ್‌...
    • ರಾಷ್ಟ್ರೀಯ ಹೆದ್ದಾರಿ-4 ಸಂಪೂರ್ಣ ಬಂದ್‌
    • ಕರ್ನಾಟಕ ಬಂದ್‌ಗೆ ತಮಿಳರ ಬೆಂಬಲ
    • ನಾರಾಯಣಗೌಡ ಮತ್ತಿತರರ ಬಂಧನ
    • ಬೆಂಗಳೂರಿನಿಂದ 9ವಿಮಾನಗಳ ಸೇವೆ ರದ್ದು
    • ಚಾಮರಾಜನಗರದಲ್ಲಿ ಕಲ್ಲು ತೂರಾಟ
    • ಕೆಎಸ್‌ಆರ್‌ಟಿಸಿ ಟಿಪೋಗೆ ಬೆಂಕಿಹಚ್ಚಲು ಯತ್ನ
    • 6ನೇ ರೈಲ್ವೆ ಪ್ಲಾಟ್‌ಫಾರಂಗೆ ವೇದಿಕೆ ದಾಳಿ... ತಂಜಾವೂರು ಎಕ್ಸ್‌ಪ್ರೆಸ್‌ಗೆ ತಡೆ... ರೈಲು ಹತ್ತಿ ಆತ್ಮಹತ್ಯೆಗೆ ಬೆದರಿಕೆ
    • ಬೆಂಗಳೂರಿನಲ್ಲಿ 20ಸಾವಿರ ಪೊಲೀಸ್‌ ಸೈನ್ಯ.. . ಲಕ್ಷಾಂತರ ಪೊಲೀಸರಿಂದ ಕರ್ನಾಟಕದಲ್ಲಿ ಕಣ್ಗಾವಲು...
    • ರಾಜಧಾನಿ ನಗರ ಬೆಂಗಳೂರಿನಲ್ಲಿ ಆಟೊ, ಬಸ್‌ಗಳಿಲ್ಲದ ಕಾರಣ, ಸಾರ್ವಜನಿಕರು ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಪರಿಸ್ಥಿತಿಯ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಟ್ಯಾಕ್ಸಿ ಚಾಲಕರು, ಹಿಂದೆ ಮುಂದೆ ನೋಡಲಿಲ್ಲ. ಒಂದಕ್ಕೆ ಹತ್ತುಪಟ್ಟು ಹೆಚ್ಚಿಗೆ ಹಣ ವಸೂಲಿ.
    • ರಾಜಭವನಕ್ಕೆ ನುಗ್ಗಲು ಯತ್ನಿಸಿದ ವಾಟಾಳ್‌ ನಾಗರಾಜ್‌, ನಿರ್ಮಾಪಕ ಸಾ.ರಾ.ಗೋವಿಂದ್‌, ಚಂದ್ರಶೇಖರ ಪಾಟೀಲ ಮತ್ತಿತರ ಪ್ರತಿಭಟನಾಕಾರರ ಬಂಧನ.
    • ಉಡುಪಿ, ಮಂಗಳೂರಿನಲ್ಲಿ ಭಾಗಶಃ ಯಶಸ್ಸು.
    • ದಾವಣಗೆರೆಯಲ್ಲಿ ಬಿಎಸ್‌ಎನ್‌ಎಲ್‌ ಕೇಂದ್ರಕ್ಕೆ ಮುತ್ತಿಗೆ ಹಾಕಿದ ರಕ್ಷಣಾವೇದಿಕೆ ಸದಸ್ಯರ ಚದುರಿಸಲು ಲಘು ಲಾಠಿ ಪ್ರಹಾರ.
    • ಶಾಲಾ ಕಾಲೇಜಿಗೆ ರಜೆ...
    • ಪ್ರಧಾನಿ ಜೊತೆ ಕಾವೇರಿ ತೀರ್ಪಿನ ಬಗ್ಗೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿಕೆ.
    • ಕರ್ನಾಟಕ ರಕ್ಷಣಾ ವೇದಿಕೆಯಿಂದ ಫೆ.22ರಂದು ದೆಹಲಿ ಚಲೋ ಕಾರ್ಯಕ್ರಮ... ಕರ್ನಾಟಕದಲ್ಲಿ ಚಳವಳಿ ಮುಂದುವರಿಕೆ...
    • ಸೋಮವಾರ ರಾಜ್‌ಕುಮಾರ್‌ ಅವರ 10ನೇ ತಿಂಗಳ ಪುಣ್ಯತಿಥಿ. ಅವರ ಸಮಾಧಿಯಿಂದ ಕಾವೇರಿ ಪ್ರತಿಭಟನಾ ಮೆರವಣಿಗೆ.
    • ಕನ್ನಡ-ಕಾವೇರಿಗಾಗಿ ಪ್ರಾಣಕೊಡುವುದಾಗಿ ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ಘೋಷಣೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X