ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್‌ ಬಳಕೆದಾರರ ಸಂಖ್ಯೆಯಲ್ಲಿ ಕರ್ನಾಟಕ ಫಸ್ಟ್‌

By Staff
|
Google Oneindia Kannada News

ಬೆಂಗಳೂರು : ಭಾರತದಲ್ಲೀಗ ಮೊಬೈಲ್‌ ಬಳಕೆದಾರರ ಸಂಖ್ಯೆ 15 ಕೋಟಿ ದಾಟಿದೆ. ಮೊಬೈಲ್‌ ಬಳಕೆ ಅತಿ ವೇಗದಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ದೂರವಾಣಿ ಸಂಪರ್ಕ ಅಧರಿಸಿ ರಾಜ್ಯಗಳನ್ನು ಎ, ಬಿ ಮತ್ತು ಸಿ ವಿಭಾಗವೆಂದು ವಿಂಗಡಿಸಲಾಗಿದೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಹಾಗೂ ಮಧ್ಯ ಭಾರತದ ಹಲವು ರಾಜ್ಯಗಳು ಎ ವಿಭಾಗದಲ್ಲಿದೆ.

ಕಳೆದ ಗಣತಿಗಿಂತ ಕರ್ನಾಟಕದಲ್ಲಿ ಶೇ. 5.2 ಬೆಳವಣಿಗೆ ಸಾಧಿಸಿದ್ದು, ಮಹಾರಾಷ್ಟ್ರವನ್ನು ಹಿಂದಿಕ್ಕಿದೆ. ಮಹಾರಾಷ್ಟ್ರದ ಪಾಲು ಶೇ. 4.9 ರಷ್ಟಿದೆ.

ದೇಶದಲ್ಲಿ ಒಟ್ಟು 11 ಕೋಟಿಗೂ ಅಧಿಕ ಜಿಎಸ್‌ಎಂ ಬಳಕೆದಾರರಿದ್ದಾರೆ. ಸಿಡಿಎಂಎ ಬಳಕೆದಾರರು ಕೇವಲ 4 ಕೋಟಿ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X