ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮವಾರ ಬೆಳಗ್ಗೆ 6 ರಿಂದ ಸಂಜೆ 6 ರವರೆಗೂ ನಿಷೇಧಾಜ್ಞೆ

By Staff
|
Google Oneindia Kannada News

ಬೆಂಗಳೂರು : ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪನ್ನು ವಿರೋಧಿಸಿ, ವಿವಿಧ ಕನ್ನಡಪರ ಸಂಘಟನೆಗಳು ಸೋಮವಾರ ಕರೆನೀಡಲಾಗಿರುವ ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತ ವಾಗಿರುವ ಹಿನ್ನೆಲೆಯಲ್ಲಿ ಜನಜೀವನ ಅಸ್ತ ವ್ಯಸ್ತಗೊಳ್ಳುವ ಸಾಧ್ಯತೆಯಿದೆ.

ಬಂದ್‌ ಸಮಯದಲ್ಲಿ ಅಹಿತಕರ ಘಟನೆಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಬಂದ್‌ ಅವಧಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಹಿಂಸಾಚಾರ ಸಂಭವಿಸಿದರೆ ಲಾಠಿ ಪ್ರಹಾರ ,ಅಶ್ರುವಾಯು ಬಳಕೆಯಿಂದ ಹಿಡಿದು ಗೋಲಿಬಾರ್‌ನಡೆಸಲು ಪೊಲೀಸರ ಸಿದ್ಧತೆ.

ಸೋಮವಾರ ಬಂದ್‌ಗೆ ವರ್ತಕರ ಒಕ್ಕೂಟ, ಸರ್ಕಾರಿ ನೌಕರರ ಸಂಘ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಚಿತ್ರೋದ್ಯಮ, ಕಲಾವಿದರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಕಾವೇರಿ ಗೆ ಬೆಂಬಲ ಹಲವು ಬಗೆ...

  • ಬೆಂಗಳೂರು-ಮೈಸೂರು ನಡುವಿನ ರಾಜ್ಯ ಹೆದ್ದಾರಿಯಲ್ಲಿ ಎಂದಿನಂತೇ ಸಂಚಾರ ಅಸ್ತವ್ಯಸ್ತ.
  • ಮಂಡ್ಯ ಮದ್ದೂರಿನಲ್ಲಿ ಪ್ರತಿಭಟನಾಕಾರರಿಂದ ರಕ್ತ ತರ್ಪಣ.
  • ಚಾಮರಾಜನಗರ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ತೀವ್ರಗೊಂಡ ರ್ಯಾಲಿ, ಮೆರವಣಿಗೆಗಳು, ರಸ್ತೆತಡೆಗಳು...
  • ಹುಬ್ಬಳಿ ರೈಲು ತಡೆ, ಸಂಚಾರ ಅಸ್ತವ್ಯಸ್ತ.
  • ಕಾವೇರಿ ತೀರದ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ನಗರದ ಕೆಲವೆಡೆ ಮುಂದುವರೆದ ಪ್ರತಿಭಟನೆ.
ಬಂದ್‌ಗೆ ಮುನ್ಸೂಚನೆ:
  • ಬಂದ್‌ ಸಮಯ ಬೆಳಗ್ಗೆ 6 ರಿಂದ ಸಂಜೆ 6 ಗಂಟೆ
  • ಅಸ್ಪತ್ರೆ,ನೀರು, ಹಾಲು ಸರಬರಾಜಿಗೆ ತೊಂದರೆ ಇಲ್ಲ.
  • ಅಟೋ ರಿಕ್ಷಾ,ಬಾಡಿಗೆ ವಾಹನ, ಹೋಟೆಲ್‌, ಸಿನೆಮಾ ಮಂದಿರ, ವಾಣಿಜ್ಯ ಸಂಕೀರ್ಣ, ಪೆಟ್ರೋಲ್‌ ಬಂಕ್‌, ಬ್ಯಾಂಕ್‌ ಎಲ್ಲಾ ಮುಚ್ಚಿರುತ್ತವೆ.
  • ಬಸ್‌, ರೈಲು, ವಿಮಾನಯಾನ ನಾಳೆ ಸಾಧ್ಯವಿಲ್ಲ,, ನಾಡಿದ್ದಕ್ಕೆ ಮುಂದೂಡಬಹುದು.
  • ಹೊರ ರಾಜ್ಯದ ಲಾರಿಗಳನ್ನು ಗಡಿ ಭಾಗದಲ್ಲೇ ತಡೆಯಲಾಗುತ್ತದೆ.
  • ಟಿವಿ ವಾಹಿನಿಗಳಲ್ಲಿ ಕಡ್ಡಾಯವಾಗಿ ಕನ್ನಡ ಕಾರ್ಯಕ್ರಮಗಳು ಮಾತ್ರ ಪ್ರಸಾರ
ವಾರಾಂತ್ಯದ ರಜೆ ಮುಂದುವರಿಕೆ:
  • ಎಲ್ಲಾ ಶಾಲಾ -ಕಾಲೇಜುಗಳಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ವಿಶ್ವವಿದ್ಯಾಲಯಗಳಿಗೂ ರಜೆ ಅನ್ವಯಿಸುತ್ತದೆ.
  • ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ರಜೆಯ ಮಜ. ಮುಖ್ಯವಾಗಿ ಐಟಿ ಕಂಪೆನಿಗಳಿಗೆ ಸಾಲಾಗಿ ರಜೆಯ ಸುಗ್ಗಿ.

  • ಮುನ್ನಚ್ಚರಿಕೆ:
  • ಬೆಂಗಳೂರಿನ ಕಾನೂನು ವ್ಯವಸ್ಥೆ ಕಾಪಾಡಲು ಸುಮಾರು 20,000 ಪೊಲೀಸರು ಕರ್ತವ್ಯ ನಿರತರಾಗಿದ್ದಾರೆ.
  • ತುರ್ತು ಅಗತ್ಯ ಬಿದ್ದರೆ ದೂರವಾಣಿ ಸಂಖ್ಯೆಗಳಿಗೆಕರೆ ಮಾಡಿ ಪೊಲೀಸ್‌ -100, ಅಗ್ನಿ ಶಾಮಕ ದಳ-101, ಸಂಚಾರ- 103 ಮತ್ತು ಅಂಬ್ಯುಲೆನ್ಸ್‌-1062

  • (ದಟ್ಸ್‌ ಕನ್ನಡ ವಾರ್ತೆ)

    ಸೂಚನೆ: ಬಂದ್‌ ಸಮಯದಲ್ಲಿ ನ ರಾಜ್ಯದ ಸ್ಥಿ ತಿಗತಿ ನಿಮಗೆ ತಿಳಿಸಲು ಸೋಮವಾರ(ಫೆ.12)ದಂದು ನಮ್ಮ ಕಚೇರಿ ಕಾರ್ಯ ನಿರ್ವಹಿಸುತ್ತಿದೆ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X