ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಪೊಲೀಸ್‌ ಸ್ಟೋರಿ’ ನೋಡುವಾಗಲೇ ಹೃದಯಾಘಾತ!

By Staff
|
Google Oneindia Kannada News

ಬೆಂಗಳೂರು : ಶುಕ್ರವಾರ ಬಿಡುಗಡೆಯಾದ ‘ಪೊಲೀಸ್‌ ಸ್ಟೋರಿ-2’ ಸಿನಿಮಾ ವೀಕ್ಷಿಸುತ್ತಿದ್ದ ವ್ಯಕ್ತಿಯಾಬ್ಬರು, ಚಿತ್ರಮಂದಿರದಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಮೃತರನ್ನು ಆಟೋ ಚಾಲಕ ಜಗನ್ನಾಥ್‌(60) ಎಂದು ಗುರ್ತಿಸಲಾಗಿದ್ದು, ಚಿತ್ರ ನೋಡುತ್ತಿದ್ದಾಗ ಅವರು ಕುರ್ಚಿಯಲ್ಲಿಯೇ ಕುಸಿದಿದ್ದಾರೆ. ಚಿತ್ರದ ಮತ್ತೊಂದು ಪ್ರದರ್ಶನ ಆರಂಭಿಸುವ ಸಂದರ್ಭದಲ್ಲಿ ಕುರ್ಚಿಯಲ್ಲಿಯೇ ಕುಳಿತಿದ್ದ ಜಗನ್ನಾಥ್‌ರನ್ನು, ಚಿತ್ರಮಂದಿರದ ವ್ಯವಸ್ಥಾಪಕರು ಗಮನಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಯಿತಾದರೂ, ಪ್ರಯೋಜನವಾಗಲಿಲ್ಲ.

ವೈದ್ಯರು ಹೃದಯಾಘಾತವನ್ನು ಖಚಿತ ಪಡಿಸಿದ್ದಾರೆ. ಸಾಯಿಕುಮಾರ್‌ ಅಭಿಮಾನಿಯಾದ ಜಗನ್ನಾಥ್‌, ಜೆ.ಸಿ.ರಸ್ತೆ ಬಳಿಯ ಪೂರ್ಣಿಮಾ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುತ್ತಿದ್ದರು.

ಉತ್ತಮ ಪ್ರತಿಕ್ರಿಯೆ : ‘ಪೊಲೀಸ್‌ ಸ್ಟೋರಿ-2’ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಯಿಕುಮಾರ್‌ ಅಭಿನಯ, ಸಂಭಾಷಣೆ ಒಪ್ಪಿಸುವ ಶೈಲಿಯನ್ನು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಸಿನಿ ರಸಿಕರ ಗಮನಕ್ಕೆ --
‘ಪೊಲೀಸ್‌ ಸ್ಟೋರಿ-2’ರ ಚಿತ್ರಪಟಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X