• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿ : 1, 2, 3, 4, ... ಆಮೇಲಿನ್ನೇನು? ಈಗ ಮುಂದೇನು?

By Staff
|

KRS damಕರ್ನಾಟಕದ ಕೂಗನ್ನು ಯಾರೂ ಕೇಳುವುದಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕದ ಬಗ್ಗೆ ಯಾವುದೇ ಪ್ರೀತಿ ಇಲ್ಲ. ಅದರ ಜತೆ ಇರುವ ಎಡಪಕ್ಷಗಳು ಸಾಮ್ರಾಜ್ಯಶಾಹಿಗಳು ವಿಶ್ವದ ಎಲ್ಲೆಡೆ ಬಡದೇಶಗಳನ್ನು ಹೇಗೆ ತುಳಿದವು ಎಂದು ಮನಕರಗುವಂತೆ ವಿವರಿಸುತ್ತವೆ. ಆದರೆ ನಮ್ಮ ದೇಶದಲ್ಲೇ ಸಾಮ್ರಾಜ್ಯಶಾಹಿ ಬ್ರಿಟಿಷ್‌ ಆಡಳಿತದಲ್ಲಿದ್ದ ಮದರಾಸು ಸರಕಾರ ದೇಶೀಯ ಸಂಸ್ಥಾನವಾದ ಮೈಸೂರಿನ ಮೇಲೆ ಕಾವೇರಿ ನೀರು ಹಂಚಿಕೆಯ ಬಗ್ಗೆ 1924ರಲ್ಲಿ ಅನ್ಯಾಯಕರ ಒಪ್ಪಂದವನ್ನು ಹೇರಿತ್ತು ಎಂಬುದನ್ನು ಅಪ್ಪಿತಪ್ಪಿಯೂ ನೆನಪಿಸಿಕೊಳ್ಳುವುದಿಲ್ಲ. ಇನ್ನು ವಿರೋಧಪಕ್ಷವಾದ ಬಿಜೆಪಿಗೆ ಆಗಾಗ ಬಡಿಯುವ ರಾಮಾಪಸ್ಮಾರ ಮತ್ತೆ ಬಡಿದಿದೆ. ನಮಗಾಗಿರುವ ಅನ್ಯಾಯವನ್ನು ಆ ಅಯೋಗ್ಯರ ಮುಂದೆ ಹೇಳಿಕೊಳ್ಳುವುದೂ ಒಂದೇ, ಸುಂಕದವನ ಮುಂದೆ ಸುಖದುಃಖ ಹೇಳಿಕೊಳ್ಳುವುದೂ ಒಂದೇ.

ಜ್ಞಾನಪೀಠಿಗಳು ಮತ್ತು ಪ್ರತಿಭಟನೆಯ ಕತೆ!

ಇನ್ನು ಪ್ರತಿಭಟನೆಯ ಬಗ್ಗೆ ಹೇಳುವುದಾದರೆ ಬಂದ್‌, ಮುಷ್ಕರಗಳಿಂದ ಯಾವ ಪ್ರಯೋಜನವೂ ಇಲ್ಲ. ಅವು ನಮ್ಮ ಹತಾಶೆಯನ್ನು ತೋರಿಸುತ್ತವೆಯೇ ವಿನಃ ಬಲವನ್ನಲ್ಲ.

ಕೇಂದ್ರ ಸರಕಾರ, ತಮಿಳುನಾಡು ಹಾಗೂ ನ್ಯಾಯಾಂಗ ನಮಗೆ ಮಾಡಿರುವ ಅನ್ಯಾಯವನ್ನು ಪ್ರತಿಭಟಿಸಲು ಹೋಗಿ ನಮ್ಮ ಬಸ್ಸುಗಳಿಗೇ ಬೆಂಕಿ ಹಚ್ಚುವುದು, ನಮ್ಮದೇ ಆಸ್ತಿಪಾಸ್ತಿಗಳನ್ನು ನಾಶಪಡಿಸುವುದು, ಸಾರಿಗೆ ಸಂಚಾರ ಅಸ್ತವ್ಯಸ್ತಗೊಳಿಸಿ ನಮ್ಮ ಜನಕ್ಕೇ ತೊಂದರೆ ಕೊಡುವುದು, ನಮ್ಮ ಮಕ್ಕಳು ಶಾಲೆಗಳಿಗೆ ಹೋಗದಂತೆ ಮಾಡುವುದು ಮುಠ್ಠಾಳತನ. (ತನ್ನ ಹೆಂಡತಿಯ ಕಾಟದಿಂದಾಗಿ ಅತಿಯಾಗಿ ಬೇಸರಗೊಂಡ ಬಾಂಗ್ಲಾದೇಶೀಯನೊಬ್ಬ ಅವಳಿಗೆ ನಾಲ್ಕು ಇಕ್ಕಡಿಸಿ ದಾರಿಗೆ ತರುವ ಬದಲು ತನ್ನ ಶಿಶ್ನವನ್ನೇ ಕತ್ತರಿಸಿಕೊಂಡ ಪ್ರಸಂಗ ನೆನಪಾಗುತ್ತಿದೆ. ಕನ್ನಡಿಗರು ಅಷ್ಟು ಮೂರ್ಖರಲ್ಲ ಎಂದು ತಿಳಿಯಲೇ?)

ಅಷ್ಟೇ ಅಲ್ಲ, ಗಿರೀಶ್‌ ಕಾರ್ನಾಡ್‌ ಹಾಗಂದರು, ಅನಂತಮೂರ್ತಿ ಹೀಗಂದರು ಎಂದು ಚರ್ಚೆಗಿಳಿದು ಸಮಯ ವ್ಯರ್ಥ ಮಾಡುವುದು ಬೇಡ. ಇಂಥವರನ್ನು ನಮ್ಮಮ್ಮ ‘‘ಉಳುವವನಿಗೆ ನರಿ ತೋರುವವರು’’ ಅಂದರೆ ಒಳ್ಳೇ ಕೆಲಸದಲ್ಲಿ ನಿರತರಾಗಿರುವವನ ಗಮನವನ್ನು ಕ್ಷುಲ್ಲಕ ವಿಚಾರಗಳತ್ತ ಸೆಳೆದು ಅವನ ಅಮೂಲ್ಯ ಸಮಯವನ್ನು ಹಾಳು ಮಾಡುವವರು ಎಂದು ಕರೆಯುತ್ತಿದ್ದರು. ಇಂಥವರ ಮಾತುಗಳಿಂದ ದಾರಿ ತಪ್ಪದೇ ನಾವು ಮಾಡಬೇಕಾಗಿರುವ ಕೆಲಸದತ್ತ ಗಮನ ಹರಿಸೋಣ.

ಅಂದಹಾಗೆ ನಾವು ಮಾಡಬೇಕಾಗಿರುವುದೇನು? ಮುಂದಿನ ಕತೆ ಏನು?

1. ಕರ್ನಾಟಕದ ಸರಕಾರ, ರಾಜಕೀಯ ಪಕ್ಷಗಳು ಈಗಲಾದರೂ ಒಗ್ಗಟ್ಟು ಪ್ರದರ್ಶಿಸಿ ತೀರ್ಪಿನ ವಿರುದ್ಧ ದನಿ ಎತ್ತಬೇಕು. ಮರುಪರಿಶೀಲನೆಯ ಪ್ರಕ್ರಿಯೆ ಸರಿಯಾಗಿ ನಡೆಯುವಂತೆ ಕಣ್ಣಿನಲ್ಲಿ ಎಣ್ಣೆ ಹಾಕಿಕೊಂಡು ನೋಡಿಕೊಳ್ಳಬೇಕು.

2. ಕೇಂದ್ರದಲ್ಲಿ ನಮ್ಮ ಪ್ರಾಬಲ್ಯ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ನಮ್ಮ ಎಂಪಿಗಳು ಒಗ್ಗಟ್ಟು ಪ್ರದರ್ಶಿಸಬೇಕು. ಅದಾಗದಿದ್ದರೆ ಕರ್ನಾಟಕದ ಜನತೆ ಒಟ್ಟಾಗಿ ಮುಂದಿನ ಚುನಾವಣೆಯಲ್ಲಿ ಒಂದೇ ಒಂದು ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡಬೇಕು. ಆ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಪಕ್ಷದ ಜತೆ ಕೈ ಸೇರಿಸಿ ಕರ್ನಾಟಕದ ಹಿತಕ್ಕಾಗಿ ತಂತ್ರ ರಚಿಸಬೇಕು, ಕಾರ್ಯ ಸಾಧಿಸಿಕೊಳ್ಳಬೇಕು.

3. ಇದಾವುದೂ ಆಗದಿದ್ದರೆ ಕರ್ನಾಟಕ ಸರಕಾರ ಅಥವಾ ಯಾವುದಾದರೊಂದು ಕನ್ನಡಪರ ಸಂಘಟನೆ ಮುಂದೆ ಬಂದು ರಾಜ್ಯಕ್ಕಾಗಿರುವ ಅನ್ಯಾಯವನ್ನೂ, ಟ್ರಿಬ್ಯೂನಲ್‌ನ ತಮಿಳುನಾಡುಪರ ಧೋರಣೆಯನ್ನೂ, ಕೇಂದ್ರದ ಮಲತಾಯಿ ಧೋರಣೆಯನ್ನೂ ಅಂಕಿಅಂಶಗಳ ಸಹಿತ, ಸಂಪೂರ್ಣ ವಿವರಗಳ ಸಹಿತ ವಿವಿಧ ಭಾಷೆಗಳ ಮಾಧ್ಯಮಗಳ ಮೂಲಕ ಇಡೀ ಭಾರತ ದೇಶದ ಜನತೆಯ ಮುಂದಿಡಬೇಕು. ದೇಶದ ಜನತೆಗೆ ಸತ್ಯ ಅರಿವಾದರೆ ಅವರು ಖಂಡಿತಾ ನಮ್ಮನ್ನು ಬೆಂಬಲಿಸುತ್ತಾರೆ. ಆ ಬೆಂಬಲವನ್ನು ಕೇಂದ್ರ ಸರಕಾರವಾಗಲೀ, ನ್ಯಾಯಾಂಗವೇ ಆಗಲಿ, ಅಥವಾ ತಮಿಳುನಾಡಿನ ಪಕ್ಷಗಳೇ ಆಗಲಿ ನಿರ್ಲಕ್ಷಿಸಲು ಖಂಡಿತಾ ಸಾಧ್ಯವಿರುವುದಿಲ್ಲ.

(The Author is an Asst. Professor, Dept. of Politics and International Studies, Pondicherry University, Pondicherry-605014)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X