• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿ : 1, 2, 3, 4, ... ಆಮೇಲಿನ್ನೇನು? ಈಗ ಮುಂದೇನು?

By Staff
|

ಆದರೆ ಕರ್ನಾಟಕದಲ್ಲಿ? ಇರುವ ಇಪ್ಪತ್ತೆಂಟು ಸ್ಥಾನಗಳು ಪರಸ್ಪರ ನಾಯಿನರಿಗಳಂತೆ ಕಚ್ಚಾಡುವ ಮೂರು ನಾಲ್ಕು ಪಕ್ಷಗಳಲ್ಲಿ ಹರಿದು ಹಂಚಿಹೋಗುತ್ತವೆ. ಹೀಗಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯಾವುದೇ ಪಕ್ಷಕ್ಕೆ ಕರ್ನಾಟಕದಿಂದ ಸಂಖ್ಯೆಯ ದೃಷ್ಟಿಯಿಂದ ಹೆಚ್ಚಿನ ಲಾಭವೇನೂ ಇರುವುದಿಲ್ಲ. ಪರಿಣಾಮವಾಗಿ ಕೇಂದ್ರ ಮಂತ್ರಿಮಂಡಳದಲ್ಲಿ ಕರ್ನಾಟಕಕ್ಕೆ ಹೇಳಿಕೊಳ್ಳುವಂಥ ಪ್ರಾತಿನಿಧ್ಯವಿರುವುದಿಲ್ಲ. ಹೀಗಾಗಿ ಲೋಕಸಭೆಯಲ್ಲಿ ಕರ್ನಾಟಕದ ದನಿ ಯಾರ ಕಿವಿಗೂ ಬೀಳುವುದಿಲ್ಲ ಹಾಗೂ ಕೇಂದ್ರ ಸರಕಾರ ಕರ್ನಾಟಕದ ಬಗ್ಗೆ ಅಂತಹ ಆಸಕ್ತಿಯನ್ನೇನೂ ತೋರುವುದಿಲ್ಲ. ಟ್ರಿಬ್ಯೂನಲ್‌ನ ಅಂತಿಮ ತೀರ್ಪು ತಮಿಳುನಾಡಿನ ಪರವಾಗಿರುವುದಕ್ಕೆ ಇದು ಬಹುಪಾಲು ಕಾರಣ.

ಕಳೆದ ಒಂದುವರ್ಷದಲ್ಲೇ ವಿಚಾರಣೆಯ ಹಂತದಲ್ಲಿ ಟ್ರಿಬ್ಯೂನಲ್‌ನ ಧೋರಣೆ ತಮಿಳುನಾಡಿನ ಪರವಾಗಿರುವುದು ಹಲಬಾರಿ ಕಂಡುಬಂದಿದೆ. ತೀರ್ಪು ನೀಡುವಲ್ಲಿ ಟ್ರಿಬ್ಯೂನಲ್‌ ತೋರಿರುವ ಕುಟಿಲತೆ ಬೆರಗು ಹುಟ್ಟಿಸುತ್ತದೆ. ಅದು ಹೇಳುವುದೇನು? ಪ್ರತಿವರ್ಷ ಕರ್ನಾಟಕ ತಮಿಳುನಾಡಿಗೆ ಕೇವಲ 192 ಟಿಎಂಸಿ ನೀರು ಬಿಟ್ಟರೆ ಸಾಕು. ಇದು ಮಧ್ಯಂತರ ತೀರ್ಪಿನಲ್ಲಿ ಸೂಚಿಸಿದ್ದ 205 ಟಿಎಂಸಿಗಿಂತ 13 ಟಿಎಂಸಿ ಕಡಿಮೆ. ಅಷ್ಟಾದರೂ ಕಡಿಮೆಯಾಯಿತಲ್ಲ ಎಂದು ಕನ್ನಡಿಗರು ಖುಶಿ ಪಡುತ್ತಾರೆ! (ಹಾಗಂತ ಟ್ರಿಬ್ಯೂನಲ್‌ ಲೆಕ್ಕ ಹಾಕಿದೆ!)

ಈಗಿನದು ಟೋಪಿ ಕತೆ! :

ವಾಸ್ತವ ಪರಿಸ್ಥಿತಿ ಹೇಗಿದೆಯೆಂದರೆ ಇನ್ನು ಮುಂದೆ ಕರ್ನಾಟಕ ತಮಿಳುನಾಡಿಗೆ ಬಿಡುವ ನೀರಿನ ಪರಿಮಾಣ ಕಡಿಮೆಯಾಗಿಲ್ಲ, ಬದಲಾಗಿ 12 ಟಿಎಂಸಿ ಹೆಚ್ಚಾಗಿದೆ!

ಈ ಮೊದಲು ಕರ್ನಾಟಕದಿಂದ ಹರಿದು ಬರುವ ನೀರನ್ನು ಮೆಟ್ಟೂರು ಜಲಾಶಯದಲ್ಲಿ ಅಳತೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಅದನ್ನು ಗಡಿಯಲ್ಲಿರುವ ಬಿಳಿಗುಂಡ್ಲುವಿನಲ್ಲೇ ಅಳತೆ ಮಾಡಬೇಕಾಗುತ್ತದೆ ಹಾಗೂ ಬಿಳಿಗುಂಡ್ಲುವಿನಿಂದ ಮೆಟ್ಟೂರಿನವರೆಗಿನ ಪ್ರದೇಶದಲ್ಲಿ ಕಾವೇರಿಗೆ ಬಂದು ಸೇರುವ ನೀರನ್ನು ಕರ್ನಾಟಕ ಬಿಡುಗಡೆ ಮಾಡಿದ ನೀರೆಂದು ಪರಿಗಣಿಸುವಂತಿಲ್ಲ! ಈ ನೀರೆಷ್ಟು ಗೊತ್ತೇ? ಟ್ರಿಬ್ಯೂನಲ್ಲೇ ಲೆಕ್ಕ ಹಾಕಿದಂತೆ 25 ಟಿಎಂಸಿ!

ಈ ಹಿಂದೆ ಕರ್ನಾಟಕ ಬಿಳಿಗುಂಡ್ಲುವಿನಲ್ಲಿ ಕೇವಲ 180 ಟಿಎಂಸಿ ಬಿಟ್ಟರೆ ಸಾಕಿತ್ತು. ಅದರೊಡನೆ ಈ 25 ಟಿಎಂಸಿಯೂ ಸೇರಿ ಒಟ್ಟು 205 ಟಿಎಂಸಿಯಾಗಿ ಮೆಟ್ಟೂರು ತಲುಪುತ್ತಿತ್ತು. ಇನ್ನು ಮುಂದೆ ಕರ್ನಾಟಕ ಬಿಳಿಗುಂಡ್ಲುವಿನಲ್ಲಿ 180ರ ಬದಲು 192 ಟಿಎಂಸಿ ನೀರು ಬಿಡಬೇಕಾಗುತ್ತದೆ. ಬಿಳಿಗುಂಡ್ಲುವಿನ ನಂತರ ಕಾವೇರಿಗೆ ಸೇರುವ 25 ಟಿಎಂಸಿ ನೀರು ತಮಿಳುನಾಡಿಗೆ ಬೋನಸ್‌! ಪರಿಣಾಮವಾಗಿ ತಮಿಳುನಾಡಿಗೆ ಇನ್ನು ಮುಂದೆ ಸಿಗಲಿರುವ ನೀರು 217 ಟಿಎಂಸಿ. ಮಧ್ಯಂತರ ತೀರ್ಪಿನಲ್ಲಿದ್ದ 205 ಟಿಎಂಸಿಗಿಂತ 12 ಟಿಎಂಸಿ ಅಧಿಕ!

ಈ ಟ್ರಿಬ್ಯೂನಲ್‌ ಕರ್ನಾಟಕಕ್ಕೆ ಹೇಗೆ ಟೋಪಿ ಹಾಕಿದೆ ನೋಡಿ!

ಹಿಂದೆ ಉಲ್ಲೇಖಿಸಿರುವ ಕರ್ನಲ್‌ ಎಲ್ಲಿಸ್‌ ವರದಿ, ತಮಿಳುನಾಡು ತಾನು ಉಪಯೋಗಿಸದೇ ಪ್ರತಿವರ್ಷವೂ ಸಮುದ್ರಕ್ಕೆ ವ್ಯರ್ಥವಾಗಿ ಹರಿಯಬಿಡುತ್ತಿರುವ ಸುಮಾರು 100 ಟಿಎಂಸಿಯಷ್ಟು ನೀರು, ಆ ರಾಜ್ಯದಲ್ಲಿರುವ ಹೇರಳ ಅಂತರ್ಜಲ- ಇದಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೇ ಟ್ರಿಬ್ಯೂನಲ್‌ ಆ ರಾಜ್ಯಕ್ಕೆ ಅಗತ್ಯಕ್ಕಿಂತ ಹೆಚ್ಚಿನ ನೀರು ಸಿಗುವಂತೆ ತೀರ್ಪು ನೀಡಿದೆ. ತಾನು ತಮಿಳುನಾಡಿನ ಪರ ಎಂದು ಸಾರಿದೆ.

ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಈಗಾಗಲೇ ಬೇಸಾಯಕ್ಕೆ ಒಳಪಟ್ಟಿರುವ ಎಲ್ಲ ಪ್ರದೇಶಗಳಲ್ಲಿ ವರ್ಷಕ್ಕೆ ಒಂದು ಬೆಳೆ ತೆಗೆಯಲೂ ಇನ್ನು ಮುಂದೆ ಸಾಕಷ್ಟು ನೀರಿಲ್ಲದಂತಾಗುವುದು, ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮತ್ತು ಮೈಸೂರು ನಗರಗಳ ಭವಿಷ್ಯದ ನೀರಿನ ಅಗತ್ಯ- ಇದಾವುದನ್ನೂ ಟ್ರಿಬ್ಯೂನಲ್‌ ಗಮನಕ್ಕೆ ತೆಗೆದುಕೊಂಡಿಲ್ಲ.

ಬದುಕು-ಪ್ರತಿಷ್ಠೆ ಮತ್ತು ಮಲತಾಯಿಯ ಕತೆ!

ತೀರ್ಪು ಹೊರಬರುವ ಹಿಂದಿನ ದಿನ ಕರ್ನಾಟಕದಲ್ಲಿದ್ದಂತಹ ಕಳವಳ, ಆತಂಕ ತಮಿಳುನಾಡಿನಲ್ಲಿ ಇರಲೇ ಇಲ್ಲ. ತಮಿಳುನಾಡಿನ ರಾಜಕಾರಣಿಗಳ ಮುಖಗಳಲ್ಲಿ ಯಾವ ಚಿಂತೆಯ ಕಳೆಯೂ ಇರಲಿಲ್ಲ. ಇದರರ್ಥ- ತೀರ್ಪು ಏನೆಂದು ಅವರಿಗೆ ಮೊದಲೇ ತಿಳಿದಿತ್ತು ಎಂದು ಊಹಿಸಬಹುದಾಗಿದೆ.

ಕೇಂದ್ರ ಸರಕಾರವನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ಡಿಎಂಕೆ ಹಾಗೂ ಅದರ ಮಿತ್ರಪಕ್ಷಗಳು ಅಂತಿಮ ತೀರ್ಪನ್ನು ತಮ್ಮ ರಾಜ್ಯಕ್ಕೆ ಅನುಕೂಲವಾಗುವಂತೆ ಬದಲಾಯಿಸಿಕೊಂಡಿರುವ ಸಾಧ್ಯತೆ ಇದೆ. ಈ ದೇಶದಲ್ಲಿ ನ್ಯಾಯಾಂಗ ಎಷ್ಟು ನಿಷ್ಪಕ್ಷಪಾತಿ, ಸೂಕ್ಷ್ಮ ವಿಷಯಗಳಲ್ಲಿ ನ್ಯಾಯ ಯಾರ ಪರ ಎಂಬುದು ನಮಗೆ ಗೊತ್ತೇ ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more