ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊರಿಗೆ ಒಂದು ದಾರಿ ಅದರೆ ಕಾರ್ನಾಡ್‌ಗೆ......

By Staff
|
Google Oneindia Kannada News

ಕಾವೇರಿ ವರ್ಸಸ್‌ ಕಾರ್ನಾಡ್‌ ಮಾತಿನ ಪಂದ್ಯ ಮತ್ತೆ ಪ್ರಾರಂಭ. ಸೋಲು ಗೆಲುವಿನ ಬಗ್ಗೆ ಚಿಂತೆ ಬೇಡ. ಸಾರ್ವಜನಿಕರಿಗೆ ಮನರಂಜನೆ ನೀಡುವುದು ಇವರ ಉದ್ದೇಶ. ಸಮಾಜಕ್ಕೆ ಬುದ್ದಿ ಹೇಳಬೇಕಾದ ಮಂದಿ , ಹಾಸ್ಯಾಸ್ಪದವಾಗುತ್ತಿರುವುದು ಅಘಾತಕಾರಿ ಬೆಳವಣಿಗೆ.

  • ಮಲೆನಾಡಿಗ
Laureates up in arm against Girish Karnadಖ್ಯಾತ ನಾಟಕಕಾರ ಗಿರೀಶ್‌ ಕಾರ್ನಾಡ್‌ ಅವರು ಕಾವೇರಿ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ನಡೆಯುವುದು ಸರಿಯಲ್ಲ ಎಂದು ಹೇಳಿ, ರಕ್ಷಣಾ ವೇದಿಕೆಯವರ ಕೆಂಗಣ್ಣಿಗೆ ಗುರಿಯಾದದ್ದು ಹಳೆ ಸುದ್ದಿ. ಈಗ ಸಾಹಿತ್ಯವಲಯದಲ್ಲಿ ಪುನಃ ಮಾತಿನ ಚಕಮಕಿ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಟಿಪ್ಪು ಪ್ರಸಂಗದಲ್ಲಿ ಅದಂತೆ ಗಿರೀಶ್‌ ಕಾರ್ನಾಡ್‌ ಅವರ ಪರ ಹಾಗೂ ವಿರೋಧ ವಕಾಲತ್ತು ವಹಿಸುವ ತಂಡಗಳು ಸಜ್ಜಾಗಿವೆ. ಎರಡು ತಂಡಗಳ ವಾಗ್ಬಾಣಗಳ ಪ್ರಕರತೆಯನ್ನು ನೋಡೋಣ

ಕಾವೇರಿ ಪರ ತಂಡ - (ಕಾಣಿಸಿಕೊಂಡಿರುವ) ಸದಸ್ಯರು: ನಾಟಕಕಾರ ಎಚ್‌.ಎಸ್‌. ಶಿವಪ್ರಕಾಶ್‌, ದಲಿತ ಕವಿ ಸಿದ್ದಲಿಂಗಯ್ಯ, ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಸಂಶೋಧಕ ಎಂ. ಚಿದಾನಂದಮೂರ್ತಿ, ಚಂದ್ರಶೇಖರ ಪಾಟೀಲ... ಪೂರ್ಣಚಂದ್ರತೇಜಸ್ವಿ(ವಿಶೇಷ)ಮುಂತಾದವರು

ಕಾರ್ನಾಡ್‌ ಪರ ತಂಡ - ಜ್ಞಾನಪೀಠಿ (ಜ್ಞಾನಪೀಠ ಪಡೆದವರು)ಯು.ಅರ್‌ .ಅನಂತ ಮೂರ್ತಿ, ಪ್ರೊ. ಬಿ.ಕೆ. ಚಂದ್ರಶೇಖರ್‌, ಡಾ.ಕೆ.ಮರುಳಸಿದ್ದಪ್ಪ, ಡಾ. ಜಿ.ಕೆ. ಗೋವಿಂದ ರಾವ್‌, ಶೂದ್ರ ಶ್ರೀನಿವಾಸ್‌, ದಲಿತ ಸಂಘರ್ಷ ಸಮಿತಿಯ ಲಕ್ಷ್ಮಿ ನಾರಾಯಣ ನಾಗವಾರ... ಮುಂತಾದವರು.

ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ತಟಸ್ಥ ನೀತಿ ಅನುಸರಿಸುತ್ತಿದ್ದಾರೆ.

ಕಾವೇರಿ ತಂಡ - ‘ಗಿರೀಶರು ಕನ್ನಡಕ್ಕೆ ಕೊಟ್ಟಿದ್ದಕ್ಕಿಂತ ಹೆಚ್ಚಿನದನ್ನು ಕರ್ನಾಟಕ ಸರ್ಕಾರ ಹಾಗೂ ಕನ್ನಡ ಜನತೆ ಕೊಟ್ಟಿದೆ. ಜನತೆಯ ನೋವನ್ನು ಅರಿಯದೆ ಈ ರೀತಿ ಹೇಳಿಕೆ ನೀಡಿರುವುದು ದುರದೃಷ್ಟಕರ. ಗಿರೀಶ್‌ ಕಾರ್ನಾಡ್‌ ಕುಡಿಯುತ್ತಿರುವುದು ಕಾವೇರಿ ನೀರನ್ನೇ ಎಂಬುದನ್ನು ಮರೆಯಬಾರದಾಗಿತ್ತು’ - ಎಚ್‌.ಎಸ್‌. ಶಿವಪ್ರಕಾಶ್‌.

ಕಾರ್ನಾಡ್‌ ಪರ ತಂಡ - (ಹೇಳಿಕೆ ಬಗ್ಗೆ ಚಕಾರ ಎತ್ತದೆ) ಕಾರ್ನಾಡ್‌ ಅವರಿಗೆ ಬೆದರಿಕೆ ಒಡ್ಡುವುದು ಅಕ್ಷಮ್ಯ ಅಪರಾಧ - ಮಾಜಿ ಸಚಿವ ಬಿ.ಕೆ ಚಂದ್ರಶೇಖರ್‌.

ಕಾವೇರಿ ತಂಡ - ಇದು ಅವಿವೇಕದ ಪರಮಾವಧಿ. ಕಾರ್ನಾಡ್‌ ಅವರು ಯಾವ ಚಿಂತನೆ ಮಾಡದೆ, ಮಾಹಿತಿ ತಿಳಿಯದೆ ಮಾತಾಡುತ್ತಾರೆ. ಅವರ ವಿವೇಕ ಹಾಗೂ ಚಿಂತನಾ ಶಕ್ತಿ ಪ್ರಶ್ನಾರ್ಹ - ಎಂ. ಚಿದಾನಂದಮೂರ್ತಿ.

ಕಾರ್ನಾಡ್‌ ಪರ ತಂಡ - ಕಾರ್ನಾಡ್‌ ಅವರು ತಾಂತ್ರಿಕ ಮಾಹಿತಿಯ ಸಂಪೂರ್ಣ ವಿವರವನ್ನು ತಿಳಿಯದೇ ಈ ರೀತಿ ಹೇಳಿಕೆ ನೀಡಿರಬಹುದು. ಸೃಜನಶೀಲ ಪ್ರತಿಭೆ ಮತ್ತು ಚಟುವಟಿಕೆಗೆ ಅಡ್ಡ ಬರುವಂತಹ ಅಕ್ರಮಣಕಾರಿ ಧೋರಣೆ ಒಪ್ಪಲು ಸಾಧ್ಯವಿಲ್ಲ. ಶಾಂತಿಯಿಂದ ವಿರೋಧಿಸುವ ಬದಲು ಬೆದರಿಕೆ ಒಡ್ಡಿದರೆ ನಾವು ಪ್ರತಿಭಟಿಸುತ್ತೇವೆ - ಯು. ಅರ್‌ .ಅನಂತ ಮೂರ್ತಿ.

ಕಾವೇರಿ ತಂಡ - ಕಾರ್ನಾಡ್‌ಗೆ ವ್ಯವಸಾಯ ಅಂದರೆ ಏನು ಅಂತಾ ಗೊತ್ತಿಲ್ಲ. ಗೊತ್ತಿದ್ದರೆ ನೀರಿನ ಮಹತ್ವದ ಅರಿವು ಇರುತ್ತಿತ್ತು. ನೀರು ನಮ್ಮೆಲ್ಲರ ಸರ್ವಸ್ವ. ರಾಜ್ಯದ ರೈತ ಬದುಕಿದರೆ ನಾವೆಲ್ಲ ಬದುಕಿದಂತೆ. ರೈತನಿಗೆ ಅಗತ್ಯವಾದ ನೀರನ್ನು ನೀಡುವುದು ನಮ್ಮ ಕರ್ತವ್ಯ ಎಂದು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಹೇಳಿದ್ದಾರೆ.

ಕಾರ್ನಾಡ್‌ ಪರ ತಂಡ - ಅದೇನೇ ಇದ್ದರೂ ಪ್ರಜಾಪ್ರಭುತ್ವದಲ್ಲಿ ತಂತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಭೂತ ಸ್ವಾತಂತ್ರ್ಯ ಎಲ್ಲರಿಗೂ ಇದೆ - ಡಾ. ಜಿ.ಕೆ. ಗೋವಿಂದರಾವ್‌.

ವ್ಯಯಕ್ತಿಕವಾಗಿ ಏನೇ ಅಭಿಪ್ರಾಯ ಇದ್ದರೂ ಅದನ್ನು ಅದನ್ನು ಕಾರ್ನಾಡರು ಹೇಳಿದ ರೀತಿ ಸರಿಯಲ್ಲ. ಅನ್ಯಾಯವಾದಗ ಹೋರಾಡುವ ಹಕ್ಕನ್ನು ನಿರಾಕರಿಸುವುದು ತರವಲ್ಲ. ಕಾರ್ನಾಡರು ತಮ್ಮ ಹೇಳಿಕೆ ಹಿಂತೆಗೆದುಕೊಳ್ಳಬೇಕು - ಸಿದ್ದಲಿಂಗಯ್ಯ ಮತ್ತು ಬರಗೂರು ರಾಮಚಂದ್ರಪ್ಪ.

ಹೇಳಿಕೆ ಹಿಂತೆಗೆದುಕೊಳ್ಳುವ ಬಗ್ಗೆ ಏನನ್ನೂ ಹೇಳಬಯಸದ ಕಾರ್ನಾಡ್‌ ಪರ ತಂಡ ಕಾರ್ನಾಡ್‌ ಅವರ ಸುರಕ್ಷತೆಗೆ ಮುಂದಾಗಿದೆ. ರಾಜ್ಯ ಸರ್ಕಾರ ಕೂಡ ಗಿರೀಶ್‌ ಕಾರ್ನಾಡ್‌ ಅವರ ನಿವಾಸಕ್ಕೆ ಭದ್ರತೆ ಒದಗಿಸಿ ಕೈತೊಳೆದುಕೊಂಡಿದೆ. ರಂಗಶಂಕರದಲ್ಲಿ ಕಾರ್ನಾಡ್‌ ಕಂಪೆನಿ ನಾಟಕ ಮುಂದೂಡಲಾಗಿದೆ. ಕನ್ನಡ ರಕ್ಷಣಾ ವೇದಿಕೆ ಕ್ರಿಯಾಶಿಲ ತಂಡವಾಗಿ ಅಕ್ರಮಣಕ್ಕೆ ಸಿದ್ದವಾಗಿ ಕೂತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X