ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರ್ಮದಾ ಕಣಿವೆಯಲ್ಲಿ ಡೈನೋಸಾರ್‌ ಮೊಟ್ಟೆಗಳು ಪತ್ತೆ

By Staff
|
Google Oneindia Kannada News

ಇಂದೋರ್‌: ಧಾರ್‌ ಜಿಲ್ಲೆಯ ಕುಕ್ಷಿ -ಬಾಗ್‌ ಪ್ರದೇಶದಲ್ಲಿ ಸುಮಾರು 18-19 ಗಂಟೆಕಾಲ ನಡೆಸಿದ ಹುಡುಕಾಟದಲ್ಲಿ 100ಕ್ಕೂ ಅಧಿಕ ಡೈನೋಸಾರ್‌ ಮೊಟ್ಟೆಗಳು ಪತ್ತೆಯಾಗಿದೆ.

ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದ ಸಂಶೋಧಕರಾದ ವಿಶಾಲ್‌ ವರ್ಮಾ, ರಾಜೇಶ್‌ ಚೌಹಾಣ್‌ ಮತ್ತು ಗೋವಿಂದ್‌ ವರ್ಮಾ ಹಳೆಯ ಪಳೆಯುಳಿಕೆಗಳನ್ನು ಹುಡುಕುತ್ತಿದ್ದಾಗ ಡೈನೋಸಾರ್‌ಗಳ ಮೊಟ್ಟೆಗಳನ್ನು ಪತ್ತೆ ಹಚ್ಚಿದ್ದಾರೆ.

ಈ ಮೊಟ್ಟೆಗಳು ಸುಮಾರು 70 ಮಿಲಿಯನ್‌ ವರ್ಷಗಳಷ್ಟು ಹಳೆಯದಾಗಿವೆ. ಕ್ರೆಟಾಶಿಯನ್‌ ಯುಗಕ್ಕೆ ಸೇರಿದವು ಎಂದು ನಂಬಲಾಗಿದೆ. ಕಳೆದ ತಿಂಗಳು ನಡೆಸಿದ ಉತ್ಖನನ ಜಾಗದಲ್ಲಿ , ಒಂದೊಂದು ಗೂಡಿನಲ್ಲಿ 6-8 ಮೊಟ್ಟೆಗಳು ಕಂಡು ಬಂದಿವೆ. ಡೈನೋಸಾರ್‌ಗಳು ಸಸ್ಯಾಹಾರಿ ಪ್ರಭೇದಕ್ಕೆ ಸೇರಿದವು ಎಂದು ತಿಳಿದುಬರುತ್ತದೆ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X