ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಬದಿ ಚಲಿಸುವ ಉಕ್ಕಿನ ಹಕ್ಕಿಗಳ ನೋಡಿದಿರಾ...???

By Staff
|
Google Oneindia Kannada News

A Russian aircraft at the Aero India Show 2007ಬೆಂಗಳೂರು : ಯುದ್ಧವಿಮಾನಗಳನ್ನು ಹಿಂಬದಿಗೆ ಚಾಲಿಸುತ್ತಾ ಉಸಿರುಗಟ್ಟಿಸುವಂತಹ ಪ್ರದರ್ಶನವನ್ನು ಭಾರತೀಯ ವಾಯುಸೇನೆಯವರು ಏರೋ-ಇಂಡಿಯಾ07ದಲ್ಲಿ ನೀಡಿದರು.

ಬುಧವಾರ ಆರಂಭವಾದ ಏರೋ ಇಂಡಿಯಾ-2007 ಪ್ರದರ್ಶನವನ್ನು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಉದ್ಘಾಟಿಸಿದರು.

ಪ್ರದರ್ಶನದ ಪ್ರಾರಂಭಿಕ ದಿನದಂದು ಯುಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ ಮಲ್ಯ, ಟಾಟಾ ಸಂಸ್ಥೆಯ ರತನ್‌ ಟಾಟಾ ಭಾಗವಹಿಸಿದ್ದರು.

ಮೊದಲ ದಿನದ ಪ್ರದರ್ಶನದಲ್ಲಿ ಸೂರ್ಯ ಕಿರಣ್‌ ತಂಡದವರು ಜಗ್ವಾರ್‌ ಹಾಗೂ ಸುಕೋಯ್‌ ಯುದ್ಧವಿಮಾನವನ್ನು ಏರಿ ನೀಡಿದ ಅದ್ಭುತ ಪ್ರದರ್ಶನ ನೋಡುಗರ ಮನಸೆಳೆಯಿತು.

ಫೆಬ್ರವರಿ 11ರವರೆಗೂ ನಡೆಯುವ ಏರೋ ಇಂಡಿಯಾ ಪ್ರದರ್ಶನದಲ್ಲಿ ಅಮೆರಿಕದ ಎಫ್‌-16, ಎಫ್‌-18 ಹಾಗೂ ರಷ್ಯಾದ ಮಿಗ್‌-29 ಮುಂತಾದ ಯುದ್ಧ ವಿಮಾನಗಳು ಪ್ರದರ್ಶನ ನೀಡಲು ಕಾದಿವೆ.

ಈ ಬಾರಿ ಎಫ್‌-16 ಯುದ್ಧ ವಿಮಾನದ ಸಹ ಚಾಲಕರಾಗಿ ರತನ್‌ಟಾಟಾ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವೆನಿಸಿದೆ.

ಪೂರಕ ಓದಿಗಾಗಿ:
ವಿಮಾನ ಜಾತ್ರೆ: ಯಲಹಂಕದಿ ಏರೋ ಇಂಡಿಯಾ-07

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X