ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾಗಾಂಧಿ ನಿಂದಿಸಿ ಇ-ಮೇಲ್‌ ಕಳಿಸಿದ್ದಕ್ಕೆ ದೂರು

By Staff
|
Google Oneindia Kannada News

ಸೂರತ್‌: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತೇಜೋವಧೆಯಾಗುವಂತಹ ಇ-ಮೇಲ್‌ಗಳನ್ನು ಕಳಿಸಿದ, ಪತ್ರಿಕಾ ಸಿಬ್ಬಂದಿಯೋರ್ವವನ ವಿರುದ್ಧ ಉಮ್ರಾ ಪೊಲೀಸರು ಮಂಗಳವಾರ ದೂರು ದಾಖಲಿಸಿದ್ದಾರೆ.

ಗುಜರಾತಿ ಸಂಜೆ ದೈನಿಕ ‘ಪ್ರತಾಪ್‌ ದರ್ಪಣ್‌’ ಪ್ರಕಾಶಕ ಪ್ರವೀಣ್‌ ಗೋಹಿಲ್‌, ತಮ್ಮ ಸಂಸ್ಥೆ ನೌಕರ ಅಲ್ಪೇಶ್‌ ಸಪ್ಕಾಲ್‌ ವಿರುದ್ಧ ಈ ಬಗ್ಗೆ ದೂರು ನೀಡಿದ್ದಾರೆ.

ಕಂಪ್ಯೂಟರ್‌ ಆಪರೇಟರ್‌ ಸಪ್ಕಾಲ್‌ ಕಳೆದ ಡಿಸೆಂಬರ್‌ 11ರಂದು, ಮಾನಹಾನಿಯಾಗುವಂತಹ 25 ಇ-ಮೇಲ್‌ಗಳನ್ನು ಕಳಿಸಿದ್ದಾನೆ. ನನಗೆ ಗೊತ್ತಾಗದಂತೆ ಕಚೇರಿ ಕಂಪ್ಯೂಟರ್‌ ಬಳಸಿಕೊಂಡು, ಬೇರೆ ಬೇರೆ ಇ-ಮೇಲ್‌ ಐಡಿಗಳ ಮೂಲಕ ಇ-ಮೇಲ್‌ಗಳನ್ನು ರವಾನಿಸಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಪ್ರತಾಪ್‌ ದರ್ಪಣ್‌’ ಪ್ರಕಟಿಸುತ್ತಿರುವ ‘ವಿಸಾತ್‌ ಪ್ರಕಾಶನ’ದ ಹೆಸರು ಕೆಡಿಸುವ ಉದ್ದೇಶದಿಂದಲೇ ಇ-ಮೇಲ್‌ಗಳನ್ನು ಕಳಿಸಲಾಗಿದೆ ಎಂದು ಗೋಹಿಲ್‌ ಆರೋಪಿಸಿದ್ದಾರೆ.

ಇಲ್ಲಿಯತನಕ ಅಲ್ಪೇಶ್‌ ಸಪ್ಕಾಲ್‌ನ ಬಂಧನವಾಗಿಲ್ಲ ಎಂದು ಮೂಲಗಳು ಹೇಳಿವೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X