ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ಶಿವಶಂಕರ್‌ ಕಿರಿಕ್‌ : ಆಟಗಾರ್ತಿ ಆತ್ಮಹತ್ಯೆ ಯತ್ನ

By Staff
|
Google Oneindia Kannada News

ದಾವಣೆಗೆರೆ : ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದರೆನ್ನಲಾದ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿ ಸಂಗೀತಾ, ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

50 ನಿದ್ರೆ ಮಾತ್ರೆಗಳನ್ನು ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದಾಗ ಅವರನ್ನು ನಗರದ ಚಿಗಟೇರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ಮಂಗಳವಾರ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಮಾಧ್ಯಮ ಪ್ರತಿನಿಧಿಗಳು ಆಸ್ಪತ್ರೆಗೆ ಭೇಟಿ ನೀಡಿದಾಗ ತಮ್ಮ ಅಳಲು ತೋಡಿಕೊಂಡ ಸಂಗೀತಾ, ಶಾಸಕ(ಎಂಎಲ್‌ಸಿ) ಎಚ್‌.ಎಸ್‌.ಶಿವಶಂಕರ್‌ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು. ಅವರ ಹಾಗೂ ಅವರ ಸಹಚರರ ಕಿರುಕುಳ ಸಹಿಸದೆ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಆರೋಪಿಸಿದರು.

ಶಾಸಕ ಶಿವಶಂಕರ್‌ ಮಾಲೀಕತ್ವದ ಚೇತನಾ ಹೋಟಲ್‌ನಲ್ಲಿ ಸಂಗೀತಾ ಸ್ವಾಗತಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಆರು ತಿಂಗಳ ಹಿಂದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.

ನಾನು ತಮ್ಮ ಲೈಂಗಿಕ ಆಸೆ ಪೂರೈಸಬೇಕೆಂದು ಶಾಸಕ ಶಿವಶಂಕರ್‌ ಒಂದೂವರೆ ವರ್ಷದಿಂದ ನನ್ನನ್ನು ಒತ್ತಾಯಿಸುತ್ತಿದ್ದರು. ನಾನು ಅವರ ಆಸೆ ಅಲಕ್ಷಿಸಿದಾಗ ಬೆದರಿಕೆಯಾಡ್ಡಿದರು. ಆದ್ದರಿಂದ ಕೆಲಸಕ್ಕೆ ರಾಜೀನಾಮೆ ನೀಡಿದೆ. ಆನಂತರ ನನ್ನ ಕುಟುಂಬದ ಸದಸ್ಯರನ್ನೂ ಕಾಡುವುದಾಗಿ ಬೆದರಿಕೆಯಾಡ್ಡಿದ ಅವರು, ತಮ್ಮ ಸಹಚರರಾದ ಜ್ಯೋತಿ ಪ್ರಕಾಶ್‌ ಹಾಗೂ ಓಂಕಾರಮೂರ್ತಿ ಅವರಿಂದ ಆ್ಯಸಿಡ್‌ ಎರಚಿಸುವುದಾಗಿ ಹೆದರಿಸಿದರು. ಹಾಗಾಗಿ ಆತ್ಮಹತ್ಯೆಗೆ ಯತ್ನಿಸಿದೆ ಎಂದವರು, ಚಿಗಟೇರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಡಿಸಿಎಂ ಲೇಜೌಟ್‌ ನಿವಾಸಿ ಹಾಗೂ ಗ್ರೀನ್ಸ್‌ ಕ್ಲಬ್‌ ಆಟಗಾರ್ತಿ ಸಂಗೀತಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ನಾಲ್ಕುಬಾರಿ ಹಾಗೂ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಎರಡುಬಾರಿ ಪ್ರತಿನಿಧಿಸಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X