ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಜಾತ್ರೆ : ಯಲಹಂಕದಿ ಏರೋ ಇಂಡಿಯಾ-07

By Staff
|
Google Oneindia Kannada News

American flight F-16ಬೆಂಗಳೂರು : ಫೆಬ್ರವರಿ 7ರಿಂದ 5 ದಿನಗಳ ಕಾಲ ನಡೆಯುವ 6ನೇ ಏರೋ ಇಂಡಿಯಾ ಶೋ-2007ನಲ್ಲಿ ಖ್ಯಾತ ಉದ್ಯಮಿ ರತನ್‌ ಟಾಟಾ ಅತ್ಯಾಧುನಿಕ ಯುದ್ಧ ವಿಮಾನ ಎಫ್‌-16ನ್ನು ನಿರ್ವಹಿಸಲಿದ್ದಾರೆ.

ಪ್ರಪಂಚದಲ್ಲಿ ಐದನೇ ಅತಿದೊಡ್ಡ ಉಕ್ಕು ಕಂಪನಿಯ ಒಡೆಯ ರತನ್‌ ಟಾಟಾ ಅವರು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಸಮಯ ಸಿಗುವುದೇ ಕಡಿಮೆ. ಸಿಕ್ಕ ಅಲ್ಪ ಸಮಯವನ್ನು ವಿಮಾನಗಳ ಚಾಲನೆಯಲ್ಲಿ ಕಳೆದಿದ್ದೇನೆ. ನಾನೊಬ್ಬ ತರಬೇತಿ ಹೊಂದಿದ ವಿಮಾನ ಹಾಗೂ ಹೆಲಿಕಾಪ್ಟರ್‌ ಪೈಲೆಟ್‌ ಎಂದಿದ್ದಾರೆ.

ಫೆಬ್ರವರಿ 7ರಂದು ರಕ್ಷಣಾ ಸಚಿವ ಎ.ಕೆ. ಅಂಟನಿ ಈ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಏರೋ- ಇಂಡಿಯಾ-2007ಪ್ರದರ್ಶನದಲ್ಲಿ 28 ದೇಶಗಳ 400 ಕಂಪನಿಗಳು ಭಾಗವಹಿಸಲಿದೆ. ರಷ್ಯಾದ ಮಿಗ್‌29ಎಂ, ಅಮೆರಿಕದ ಎಫ್‌ -18, ಎಫ್‌ -16, ಓರಿಯನ್‌ ಪಿ3, ಫ್ರಾನ್ಸ್‌ನ ಥೇಲ್ಸ್‌, ಜಿಫಾಸ್‌ ಮುಂತಾದ ಯುದ್ಧ ವಿಮಾನಗಳು ಪ್ರದರ್ಶನ ನೀಡಲಿವೆ.

ಭಾರತ ಹಿಂದೂಸ್ಥಾನ್‌ ಏರೋನಾಟಿಕಲ್‌ ಲಿಮಿಟೆಡ್‌(ಹೆಚ್‌ಎಎಲ್‌) ಸಂಸ್ಥೆ ತನ್ನ ಲಘು ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳನ್ನು ವಿಶೇಷವಾಗಿ ಪ್ರದರ್ಶಿಸಲಿದೆ. ಯಲಹಂಕದಲ್ಲಿ ಸುಮಾರು 2,50,000 ಚದುರ ಮೀಟರ್‌ ಜಾಗವನ್ನು ಏರೋ ಶೋಗಾಗಿ ಮೀಸಲಿಡಲಾಗಿದೆ ಎಂದು ಏರೋ ಇಂಡಿಯಾದ ಆಯೋಜಕರು ಹೇಳಿದ್ದಾರೆ.

ಪ್ರದರ್ಶನ ನೋಡಬೇಕಾ? : ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಏರೋ ಇಂಡಿಯಾದ ವೈಮಾನಿಕ ಮೇಳ ನಡೆಯಲಿದೆ. ಟಿಕೆಟ್‌ಗಳ ಬೆಲೆ 200, 300, ಮತ್ತು 750 ರೂಪಾಯಿ. ಟಿಕೆಟ್‌ಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ -25566510, 9845020264

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X