• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದ ಸದ್ಯದ ಸ್ಥಿತಿ-ಗತಿ : ಬಸ್‌ ಸಂಚಾರ ಸ್ಥಗಿತ, ಆತಂಕ

By Staff
|
Google Oneindia Kannada News

ಬೆಂಗಳೂರು : ಕಾವೇರಿ ನ್ಯಾಯಮಂಡಳಿ ತೀರ್ಪಿನ ಹಿನ್ನೆಲೆ, ರಾಜ್ಯದಲ್ಲಿ ಸೋಮವಾರ ಪರಿಸ್ಥಿತಿ ಕಾವೇರುತ್ತಿದೆ. ಟೀವಿ ಮುಂದೆ ಕೆಲವರು ಕೂತಿದ್ದರೆ, ಇಂಟರ್‌ನೆಟ್‌ನಲ್ಲಿ ಕೆಲವರು ಸದ್ಯದ ವರ್ತಮಾನ ಹುಡುಕುತ್ತಿದ್ದಾರೆ. ಎಲ್ಲರ ಮನದಲ್ಲೂ ಆತಂಕ.

ಸದ್ಯದ ಪರಿಸ್ಥಿತಿಯ ಸಂಕ್ಷಿಪ್ತ ಚಿತ್ರಣ -

  • ಚಾಮರಾಜನಗರದಲ್ಲಿ ತಮಿಳುನಾಡು ಬಸ್‌ಗಳ ಸಂಚಾರ ಸ್ಥಗಿತ.
  • ಮೈಸೂರು, ಮಂಡ್ಯದಲ್ಲಿ ಕಟ್ಟೆಚ್ಚರ... ಪೊಲೀಸ್‌ ಪಥ ಸಂಚಲನ... ವದಂತಿಗಳ ನಂಬಬೇಡಿ ಎಂಬ ಮನವಿ...
  • ಕರ್ನಾಟಕ ರಾಜ್ಯದ ಪರವಾಗಿ ತೀರ್ಪು ಬರಲಿ ಎಂದು ವಿವಿಧ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ನಡೆಸಿದ ಮಂದಿ, ತೀರ್ಪು ಕೇಳಿ ಬೇಸರಗೊಂಡಿದ್ದಾರೆ.
  • ರಾಜಾಜಿನಗರದಲ್ಲಿ ಆತಂಕದ ಸ್ಥಿತಿ... ಶಾಲಾ ಕಾಲೇಜಿಗೆ ರಜೆ...
  • ಕನ್ನಡ ಪರ ಸಂಘಟನೆಗಳ ಸಮಾಲೋಚನೆ. ಮುಂದೆ ಏನು ಮಾಡಬೇಕೆಂಬ ಚರ್ಚೆ.
  • ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ 700ಕ್ಕೂ ಹೆಚ್ಚು ರೌಡಿಗಳು ಮತ್ತು ಕಿಡಿಗೇಡಿಗಳ ಬಂಧನ...
  • ತೀರ್ಪು ಏನೇ ಇರಲಿ, ತಮಿಳುನಾಡಿಗೆ ಹನಿ ನೀರು ಬಿಡುವುದಿಲ್ಲ -ಮಂಡ್ಯ ರೈತ ಮುಖಂಡರ ಅಭಿಪ್ರಾಯ.
(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X