ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಿಗೆ ಬೆಂಕಿ ಬಿದ್ದಿದೆ, ಕಾರ್ನಾಡ್‌ ಪಿಟೀಲು ನುಡಿಸುತ್ತಿದ್ದಾರೆ!

By Staff
|
Google Oneindia Kannada News

ಬೆಂಗಳೂರು : ನ್ಯಾಯಮಂಡಳಿ ತೀರ್ಪುಗಳ ವಿರುದ್ಧ ಮೇಲ್ಮನವಿ ಸಲ್ಲಿಸುವುದು ಮತ್ತು ಪ್ರಶ್ನಿಸುವುದು ತಪ್ಪೆಂದು... ಅದರಿಂದ ಸಾಮರಸ್ಯ ಉಳಿಯುವುದಿಲ್ಲವೆಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ಹೇಳಿದ್ದಾರೆ.

ಇಂಗ್ಲಿಷ್‌ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಸೋಮ-ವಾರ ಮಧ್ಯಾನ್ಹ ಈ ಬಗ್ಗೆ ಮಾತನಾಡಿದ್ದಾರೆ. ಕಾವೇರಿ ಮತ್ತು ಕಾವೇರಿ ನ್ಯಾಯಮಂಡಳಿಯ ಹೆಸರು ಪ್ರಸ್ತಾಪಿಸದೆ ಸೂಚ್ಯವಾಗಿ ಈ ಹೇಳಿಕೆಯನ್ನು ಅವರು ನೀಡಿದ್ದಾರೆ.

ನಾಡಿನ ಹಿರಿಯ ಸಾಹಿತಿಯ ಹೇಳಿಕೆಯನ್ನು ಕನ್ನಡ ಪರ ಸಂಘಟನೆಗಳು ಖಂಡಿಸಿದ್ದು, ಕೂಡಲೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿವೆ.

ಚಾನೆಲ್‌ಗಳ ವರ್ತನೆ : ಕಾವೇರಿ ನ್ಯಾಯಮಂಡಳಿ ತೀರ್ಪಿಗೂ, ತಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಉದಯ, ಈಟೀವಿ, ಜೀಚಾನೆಲ್‌ಗಳು ಸೋಮವಾರ ವರ್ತಿಸಿವೆ. ನಾಡಿಗೆ ನಾಡೇ ಟೀವಿ ಮುಂದೆ ಕೂತಿದ್ದರೆ, ಎಂದಿನ ವಾರ್ತಾ-ಸಂಚಿ-ಕೆ-ಗ-ಳನ್ನು ಬಿಟ್ಟರೆ ಉಳಿ-ದಂತೆ ಅವು ಪ್ರತಿ-ದಿ-ನದ ಕಾರ್ಯ-ಕ್ರ-ಮದ ಭಾಗ-ಗ-ಳಾಗ ದೈನಿಕ ಧಾರಾವಾಹಿಗಳ ಪ್ರಸಾರದಲ್ಲಿ ಮೈಮರೆತಿದ್ದವು. ವಾರ್ತೆ, ಈಗಿನ ಸುದ್ದಿ ನೋಡಲು ಬಂದವರು, ಪರಂಪರೆ, ಬದುಕು, ಸಿಲ್ಲಿಲಲ್ಲಿ ಮತ್ತಿತರ ಧಾರಾವಾಹಿಗಳ ನೋಡಬೇಕಾಯಿತು.

ಈ ಮಧ್ಯೆ ಟೀವಿ ನೈನ್‌ ತನ್ನ ವೃತ್ತಿ ನೈಪುಣ್ಯತೆಯನ್ನು ಮೆರೆದಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X