ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನೇರುಘಟ್ಟದಲ್ಲೀಗ ಮರಿಯಾನೆಯ ಆಟ-ಹುಡುಗಾಟ!

By Staff
|
Google Oneindia Kannada News

ಬೆಂಗಳೂರು : ಬನ್ನೇರುಘಟ್ಟ ಅಭಯಾರಣ್ಯಕ್ಕೆ ನೀವು ಗುರುವಾರದ ನಂತರ ಭೇಟಿ ನೀಡಿದರೆ, ನಾಲ್ಕು ದಿನ ಪ್ರಾಯದ ಮುದ್ದಾದ ಮರಿಯಾನೆಯನ್ನು ವೀಕ್ಷಿಸಬಹುದು!

ಇಲ್ಲಿನ ಸುವರ್ಣ ಎಂಬ ಆನೆಗೀಗ ಪುತ್ರಿಯೋತ್ಸವದ ಸಡಗರ. ಭಾನುವಾರವಷ್ಟೇ ಹೆರಿಗೆಯಾಗಿದ್ದು, ತಾಯಾನೆ ಮತ್ತು ಮರಿಯಾನೆಗಳು ಕ್ಷೇಮವಾಗಿವೆ. ಸುಮಾರು 75 ಕಿಲೋ ತೂಕದ ಮರಿಯಾನೆಯ ತುಂಟಾಟಗಳು ಎಲ್ಲರ ಸೆಳೆಯುತ್ತಿವೆ. ಗುರುವಾರದಿಂದ ಈ ಮರಿಯಾನೆ, ಪ್ರವಾಸಿಗರ ವೀಕ್ಷಣೆಗೆ ಲಭ್ಯ.

ಮರಿಯಾನೆಗೆ ಕಲ್ಲು ಸಕ್ಕರೆ, ತುಪ್ಪ, ಗೋಧಿ, ಈರುಳ್ಳಿ ಸೇರಿದಂತೆ ವಿಶೇಷ ಆಹಾರದ ಉಪಚಾರ ಸಾಗುತ್ತಿದೆ. ಮರಿಯಾನೆಯ ಸೇರ್ಪಡೆಯಿಂದ ಬನ್ನೇರುಘಟ್ಟ ಅಭಯಾರಣ್ಯದಲ್ಲಿನ ಸಾಕಾನೆಗಳ ಸಂಖ್ಯೆ ಎಂಟನ್ನು ತಲುಪಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X