ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಎಂ-ಬಿ ಶುಲ್ಕ 2ಲಕ್ಷಕ್ಕೆ ಏರಿಕೆ -ಮುಖೇಶ್‌ ಅಂಬಾನಿ

By Staff
|
Google Oneindia Kannada News

ಬೆಂಗಳೂರು : ಸ್ನಾತಕೋತ್ತರ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳ ವಾರ್ಷಿಕ ಶುಲ್ಕವನ್ನು 1.75 ಲಕ್ಷ ದಿಂದ 2ಲಕ್ಷಕ್ಕೆ ಏರಿಸಲು ಬೆಂಗಳೂರಿನ ಐಐಎಂ ನಿರ್ಧರಿಸಿದೆ.

ಐಐಎಂ-ಬಿ (Indian Institute of management) ಚೇರ್‌ಮನ್‌ ಹಾಗೂ ರಿಲೆಯನ್ಸ್‌ ಕಂಪೆನಿಯ ಅಧ್ಯಕ್ಷ ಮುಖೇಶ್‌ ಅಂಬಾನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಪರಿಷ್ಕೃತ ದರದಂತೆ ದೇಶಿಯ ವಿದ್ಯಾರ್ಥಿಗಳು 25 ಸಾವಿರ ಹೆಚ್ಚಿನ ಹಣ ಹಾಗೂ ವಿದೇಶಿ ವಿದ್ಯಾರ್ಥಿಗಳು, ಸುಮಾರು 15 ಸಾವಿರ ಅಮೆರಿಕನ್‌ ಡಾಲರ್‌ ಮೊತ್ತವನ್ನು ನೀಡಬೇಕಾಗುತ್ತದೆ.

ಐಐಎಂ-ಬಿ ಪ್ರತಿ ವಿದ್ಯಾರ್ಥಿಯ ಮೇಲೆ ವಾರ್ಷಿಕ 4 ಲಕ್ಷ ರೂ. ವೆಚ್ಚ ಮಾಡುತ್ತಿದೆ. ಈ ಪೈಕಿ ಶೇ.50ರಷ್ಟನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯಲಾಗುತ್ತಿದೆ. ಮೀಸಲು ನೀತಿಯ ಅನ್ವಯ ಈ ವರ್ಷ ಮೀಸಲಾತಿಯನ್ನು ಶೇ.7ರಷ್ಟು ಹೆಚ್ಚಿಸಲಾಗಿದೆ.

ಐಐಎಂಬಿಗಾಗಿ ಹೊಸ ಕಟ್ಟಡ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಹಣ ನೀಡಲು ಮುಂದಾಗಿದೆ ಎಂದು ಐಐಎಂಬಿಯ ನಿರ್ದೇಶಕ ಪ್ರಕಾಶ್‌.ಜಿ. ಅಪ್ಟೆ ತಿಳಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X