• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ-ವೆಸ್ಟ್‌ ಇಂಡೀಸ್‌ : ಇದು ನಿರ್ಣಾಯಕ ಪಂದ್ಯ!

By Staff
|

ಬೆಂಗಳೂರು : 2008ರಲ್ಲಿ ನಡೆಯಲಿರುವ ವಿಶ್ಪಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಪೂರ್ವಭಾವಿ ತಯಾರಿಯಂತೆ ಇದೆ ಈ ಸರಣಿ.

ಇಂದು ಬರೋಡದಲ್ಲಿ (ಜ.31) ನಡೆಯುತ್ತಿರುವ ಭಾರತ-ವೆಸ್ಟ್‌ ಇಂಡೀಸ್‌ ನಡುವಣ ಕೊನೆಯ ಪಂದ್ಯ ಮತ್ತು ಫೆಬ್ರವರಿಯಲ್ಲಿ ನಡೆಯುವ ಭಾರತ- ಶ್ರೀಲಂಕ ಪಂದ್ಯಾವಳಿಗಳ ನಂತರ ವಿಶ್ವಕಪ್‌ಗೆ ನಾಗಾಲೋಟ ಆರಂಭವಾಗುತ್ತದೆ.

ನಾಲಕ್ಕು ಪಂದ್ಯಗಳ ಪ್ರಸಕ್ತ ಸರಣಿಯಲ್ಲಿ ಎರಡನ್ನು ಭಾರತ ಗೆದ್ದು, ಇನ್ನೊಂದನ್ನು ವೆಸ್ಟ್‌ ಇಂಡಿಸ್‌ ತನ್ನದಾಗಿಸಿಕೊಂಡಿದೆ. ಮೊದಲೆರಡು ಪಂದ್ಯಗಳನ್ನು ಚೆನ್ನಾಗಿಯೇ ಆಡಿ ಗೆದ್ದ ಭಾರತ, ಚೆನ್ನೈನ ಪಂದ್ಯವನ್ನೂ ಕೂಡ ಚೆನ್ನಾಗಿಯೇ ಆಡಿ ಸೋತದ್ದು ನಿಮಗೆ ಗೊತ್ತಿದೆ!

ಪ್ರತಿಯಾಂದು ಕ್ರಿಕೆಟ್‌ ಪಂದ್ಯಗಳ ಬಾಲ್‌ ಬಾಲ್‌ ಬೈ ಬಾಲ್‌ ವಿವರಣೆಯನ್ನು ನೀಡುವ ನಮ್ಮ ಸೋದರ ಜಾಲತಾಣ ‘ದಟ್ಸ್‌ಕ್ರಿಕೆಟ್‌.ಒನ್‌ಇಂಡಿಯಾ.ಇನ್‌’ ಎಂದಿನಂತೆ ಬರೋಡ ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದೆ. ಭಾರತ ತಂಡ 50 ಓವರ್‌ಗಳಲ್ಲಿ 3ವಿಕೆಟ್‌ ನಷ್ಟಕ್ಕೆ 341ರನ್ನು ಗಳಿಸಿದೆ.

ರಾಬಿನ್‌ ಉತ್ತಪ್ಪ (28) , ಗಂಗೂಲಿ (68) ರಾಹುಲ್‌ ದ್ರಾವಿಡ್‌ (78) ಸಚಿನ್‌ ಟೆಂಡೂಲ್ಕರ್‌ (100), ಮಹೇಂದ್ರ ಸಿಂಗ್‌ ದೋನಿ(40) ಭಾರತದಪರ ರನ್‌ ಪೇರಿಸುವುದರಲ್ಲಿ ನೆರವಾಗಿದ್ದಾರೆ. ಟಾಸ್‌ಗೆದ್ದು ಭಾರತವನ್ನು ಬ್ಯಾಂಟಿಂಗ್‌ಗೆ ಕಳಿಸಿದ ವಿಂಡೀಸ್‌, ಈ ಬಾರಿಯೂ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗುತ್ತಾ? ಈ ಸರಣಿ ಭಾರತದ ಪರ ( 3-1) ಆಗುತ್ತಾ? ಅಥವಾ 2-2 ರಲ್ಲಿ ಸಮನಾಗುತ್ತಾ? ಆಟ ನೋಡೋಣ. ಆಟದ ಸಮಯ : ಬೆಳಗ್ಗೆ 8.55ರಿಂದ ಮಧ್ಯಾಹ್ನ 12.25. ನಂತರ 1.10ರಿಂದ ಸಂಜೆ 4.40.

ಪಂದ್ಯದ ಪೂರ್ಣ ವಿವರಗಳಿಗಾಗಿ ಭೇಟಿ ನೀಡಿ - http://www.thatscricket.com

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more