ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೇಡೀಸ್‌ ಸೀಟ್‌ ಅಲಂಕರಿಸಿದ್ದ 129ಪುರುಷರಿಗೆ ದಂಡ!

By Staff
|
Google Oneindia Kannada News

BMTC Busಬೆಂಗಳೂರು : ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರ ಆಸನ ಅಲಂಕರಿಸುವ ಪ್ರಯಾಣಿಕರು, ಇನ್ಮುಂದೆ ತಮ್ಮ ಚಾಳಿ ಬದಲಿಸಿದರೆ ಒಳ್ಳೆಯದು!

ಬೆಂಗಳೂರು ಸಂಚಾರಿ ಪೊಲೀಸರ ವಿಭಾಗ ಮಂಗಳವಾರ ಕಾರ್ಯಾಚರಣೆ ನಡೆಸಿ, ಮಹಿಳೆಯರ ಆಸನದಲ್ಲಿ ಕುಳಿತಿದ್ದ 129ಮಂದಿ, ಜೊತೆಗೆ ಬಸ್‌ನ ಬಾಗಿಲಲ್ಲಿ ನೇತಾಡುತ್ತಿದ್ದ 224ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಿದೆ. ಇವರುಗಳಿಂದ 29,770ರೂ.ಗಳನ್ನು ದಂಡ ರೂಪದಲ್ಲಿ ವಸೂಲಿ ಮಾಡಿದೆ.

ಪುರುಷ ಪ್ರಯಾಣಿಕರೇ, ನಿಮಗೆ ಗೊತ್ತಿರಲಿ; ಮಹಿಳೆಯರು ಇರಲಿ, ಇಲ್ಲದಿರಲಿ ಅವರಿಗಾಗಿ ಮೀಸಲಿಟ್ಟ ಆಸನಗಳ ಅಲಂಕರಿಸುವುದು ನಿಯಮದನ್ವಯ ತಪ್ಪು. ಸಿಕ್ಕಿಬಿದ್ದರೆ ದಂಡ ಕಟ್ಟುವುದು ಅನಿವಾರ್ಯ! ಇದರ ಮೇಲೆ ನಿಮ್ಮಿಷ್ಟ!

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X