ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರದಿಂದ ಟಿ.ನರಸೀಪುರದಲ್ಲಿ ಮಹಾಕುಂಭಮೇಳ

By Staff
|
Google Oneindia Kannada News

ಮೈಸೂರು : ಜಿಲ್ಲೆಯ ತಿರಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ, ಜನವರಿ 31ರಿಂದ ಫೆಬ್ರವರಿ 2ರ ವರೆಗೆ ಏಳನೆಯ ಮಹಾಕುಂಭಮೇಳ ನಡೆಯಲಿದೆ.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಗಣಪತಿ ಸಚ್ಚಿದಾನಂದ ಸ್ವಾಮೀಜಿ, ರವಿಶಂಕರ್‌ ಗುರೂಜಿ, ಶಿವಪುರಿ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧಿಪತಿಗಳು ಈ ಕುಂಭಮೇಳದಲ್ಲಿ ಭಾಗವಹಿಸಲಿದ್ದಾರೆ.

ಮಂಗಳವಾದ್ಯ, ವೀರಗಾಸೆ, ಕೊಂಬು ಕಹಳೆ, ಗಾರುಡಿ ಕುಣಿತ, ಕೋಲಾಟ, ತಮಟೆ ವಾದ್ಯ, ಕೀಲು ಕುದುರೆ ಮುಂತಾದ ನೃತ್ಯ ತಂಡಗಳ ಜತೆಗೆ ಸ್ತಬ್ಧ ಚಿತ್ರಗಳ ಮೆರವಣಿಗೆ, ತಿರಮಕೂಡಲಿನ ಪ್ರಸಿದ್ಧ ಶ್ರೀ ನರಸಿಂಹಸ್ವಾಮಿ ದೇವಸ್ಥಾನದಿಂದ ಹೊರಡಲಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ತ್ರಿವೇಣಿಸಂಗಮದ ಹತ್ತಿರ ಸೇರಲಿದೆ. ಎಲ್ಲಾ ಮಠಾಧೀಶರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

3 ದಿನಗಳ ಮಹಾ ಕುಂಭಮೇಳದ ಕಾರ್ಯಕ್ರಮ ಪಟ್ಟಿ ಇಂತಿದೆ :

ಜನವರಿ 31-ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಪುಣ್ಯಾಹ, ಕಲಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ.

  • ಸಂಜೆ 4ಕ್ಕೆ: ಅಗ್ರತೀರ್ಥ ಸಮೇತ ಯಾಗಶಾಲಾ ಪ್ರವೇಶ, ವಾಸ್ತು ಹೋಮ.
  • ಸಂಜೆ 5ಕ್ಕೆ : ಕುಂಭಮೇಳದ ಉದ್ಘಾಟನೆ ವಿಧಾನಸಭಾಧ್ಯಕ್ಷ ಕೃಷ್ಣ ಅವರಿಂದ. ಮಾಜಿ ಶಾಸಕರಾದ ಎಚ್‌.ಸಿ. ಮಹದೇವಪ್ಪ, ಎಚ್‌. ಗಂಗಾಧರ್‌ ಅವರ ಉಪಸ್ಥಿತಿ.
  • ಬೇಲಿ ಮಠದ ತ್ರಿನೇತ್ರ ಮಹಾಂತ ಸ್ವಾಮೀಜಿಯಿಂದ ಉಪನ್ಯಾಸ.
ಫೆಬ್ರವರಿ 1-ಬೆಳಗ್ಗೆ 6ಕ್ಕೆ: ನವಗ್ರಹ ಪೂಜೆ, ಜಪಹೋಮ, ಪೂರ್ಣಾಹುತಿ.
  • ಬೆಳಗ್ಗೆ 11ಕ್ಕೆ : ಧಾರ್ಮಿಕ ಸಭೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎಚ್‌ .ಎಸ್‌. ಮಹದೇವ ಪ್ರಸಾದ್‌ ಅವರು ಉದ್ಘಾಟಿಸಲಿದ್ದು, ಸಾರಿಗೆ ಸಚಿವ ಚೆಲುವರಾಯಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
  • ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಉಷಾದೇವಿ ಅವರಿಂದ ಉಪನ್ಯಾಸ.
  • ಸಂಜೆ 4ಕ್ಕೆ: ಸುದರ್ಶನ ಹೋಮ.
  • ಸಂಜೆ 5ಕ್ಕೆ : ಧಾರ್ಮಿಕ ಸಭೆ -ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ರಾಜ್ಯ ಸಚಿವ ಅಂಬರೀಷ್‌ ಅವರಿಂದ ಉದ್ಘಾಟನೆ.
  • ನಂತರ ಶ್ರೀಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಉಪನ್ಯಾಸ.
ಫೆಬ್ರವರಿ 2- ಬೆಳಗ್ಗೆ 6ಕ್ಕೆ: ಸಪ್ತನದಿ ಕಲಶ ಪೂಜೆ, ಹೋಮ, ತ್ರಿವೇಣಿ ಸಂಗಮದಲ್ಲಿ ಜಲಸಂಯೋಜನೆ
  • ಬೆಳಗ್ಗೆ 9:15 ರಿಂದ 10:15 ರವರೆಗೆ: ಪುಣ್ಯಸ್ನಾನ. ಮಧ್ಯಾಹ್ನ 1:30ರವರೆಗೂ ಮುಂದುವರಿಕೆ.
  • ಮಧ್ಯಾಹ್ನ 1.00ಕ್ಕೆ : ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿಯವರಿಂದ ಧಾರ್ಮಿಕ ಸಭೆ ಉದ್ಘಾಟನೆ.
  • ಉಪ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವೇಶ್ವರ ಭಟ್‌ ಹಾಗೂ ಐ.ಎಂ. ವಿಠ್ಠಲಮೂರ್ತಿ ಅವರಿಂದ ಉಪನ್ಯಾಸ.
(ದಟ್ಸ್‌ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X