ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛೇ! ಛೇ!! : ಗುಲ್ಬರ್ಗ ಶಾಸಕರ ಮುಂದೆ ನಂಗಾ ನಾಚ್‌!

By Staff
|
Google Oneindia Kannada News

ಗುಲ್ಬರ್ಗ : ಗುಲ್ಬರ್ಗ ನಗರದ ಬಿಜೆಪಿ ಶಾಸಕ ಚಂದ್ರಶೇಖರ ಪಾಟೀಲರ, ಹುಟ್ಟುಹಬ್ಬದ ಸಮಾರಂಭದಲ್ಲಿ ನಡೆದ ಬೆತ್ತಲೆ ಕುಣಿತವನ್ನು ವಿವಿಧ ಸಂಘಟನೆಗಳು ಖಂಡಿಸಿವೆ.

ಶಾಸಕರ ಹುಟ್ಟುಹಬ್ಬದ ಸಂದರ್ಭದಲ್ಲಿ ಮದ್ಯದ ಹೊಳೆ ಹರಿದಿದೆ. ಹುಡುಗಿಯರ ಅರೆ ಬೆತ್ತಲೆ ಕುಣಿತ ನಡೆದಿದೆ. ಕಾರ್ಯಕ್ರಮದಲ್ಲಿದ್ದ ಯುವಕ ಯುವತಿಯರಂತೂ ಮತ್ತಿನಲ್ಲಿ ತೇಲುತ್ತಿದ್ದರು. ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಕಮ್ಯುನಿಸ್ಟ್‌ ಪಕ್ಷದ ಮುಖಂಡರು ಟೀಕಿಸಿದ್ದಾರೆ.

ನಗರದಲ್ಲಿ ಪ್ರತಿಭಟನೆ ಮೂಲಕ ಸಂಘಟನೆಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಶಾಸಕರು ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿವೆ.

ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂಸದ ಅನಂತಕುಮಾರ್‌, ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ವಿ.ಎಸ್‌.ಆಚಾರ್ಯ, ಪಶು ಸಂಗೋಪನಾ ಸಚಿವ ರೇವೂ ನಾಯಕ ಬೆಳಮಗಿ ಮತ್ತಿತರರ ಎದುರೇ ನಂಗಾನಾಚ್‌ ನಡೆದಿದೆ ಎನ್ನಲಾಗಿದೆ.

ಸ್ಥಳೀಯ ಚಾನೆಲ್‌ ಶನಿವಾರ(ಜ.27) ರಾತ್ರಿ ನಡೆದ ಹುಟ್ಟುಹಬ್ಬ ಆಚರಣೆಯ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿದ್ದು, ಸೋಲಾಪುರದಿಂದ ಬಂದಿದ್ದ ಯುವತಿಯರು ಅಶ್ಲೀಲವಾಗಿ ಕುಣಿದಿರುವುದು ನಿಜ ಎಂಬ ಮಾತು ಕೇಳಿ ಬರುತ್ತಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X