ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಕುಟುಂಬಗಳಲ್ಲೂ ಮೊಹರಂ ಹಬ್ಬದ ಸಡಗರ

By Staff
|
Google Oneindia Kannada News

ಬೆಂಗಳೂರು : ಈ ನಾಡಿನಲ್ಲಿ ಕೆಲವೊಮ್ಮೆ ಜಾತಿ-ಧರ್ಮಗಳ ಹೆಸರಲ್ಲಿ ರಕ್ತದೋಕುಳಿ ನಡೆಯುತ್ತದೆ. ಇದೇ ನಾಡಲ್ಲಿ ಮೊಹರಂ ಸಂದರ್ಭದಲ್ಲಿ ಕೋಮು ಸಾಮರಸ್ಯ ಮೂಡುತ್ತದೆ!

ಹೌದು, ಮಂಗಳವಾರ ಮೊಹರಂ ಸಂಭ್ರಮ ಕಂಡು ಬಂದಿದ್ದು, ಹಿಂದೂ-ಮುಸ್ಲಿಂರು ಜಂಟಿಯಾಗಿ ಹಬ್ಬದ ಸಡಗರವನ್ನು ಹಂಚಿಕೊಳ್ಳುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ , ವಿಶೇಷವಾಗಿ ಹಳ್ಳಿಗಳಲ್ಲಿ ಮೊಹರಂ ಸಂತೋಷ ಮೇಳೈಸಿದೆ.

ಚಿಕ್ಕಮಗಳೂರು ಜಿಲ್ಲೆಯ ಸದಾನಂದ ಸ್ವಾಮಿ ಕುಟುಂಬ, ಕಳೆದ 75ವರ್ಷಗಳಿಂದ ಮೊಹರಂ ಆಚರಿಸುತ್ತಿದೆ. ಸದಾನಂದಸ್ವಾಮಿ ತಂದೆ ಎಚ್‌. ಆಂಜನೇಯ ಹಾಕಿಕೊಟ್ಟ ಪರಿಪಾಠವನ್ನು ಅವರ ಕುಟುಂಬ ಮುಂದುವರೆಸಿದೆ. ಮೊಹರಂ ಹಬ್ಬವನ್ನು ಶ್ರದ್ಧೆ-ಭಕ್ತಿಯಿಂದ ಆಚರಿಸುವ ಸದಾನಂದಸ್ವಾಮಿ ಕುಟುಂಬ, ಯಲ್ಲಮ್ಮ ಮತ್ತು ವೆಂಕಟೇಶ್ವರ ಸ್ವಾಮಿ ಭಕ್ತರು ಸಹಾ ಹೌದು. ಇಂತಹ ಕುಟುಂಬಗಳು ನಾಡಿನಲ್ಲಿ ಸಾಕಷ್ಟಿವೆ.

ಇನ್ನೊಂದು ವರದಿ : ಕೊಪ್ಪಳ ಬಳಿಯ ಕುದುರಿಮೋತಿಯಲ್ಲಿ ಮಂಗಳವಾರ ಹಬ್ಬದ ಸಡಗರ. ಹಿಂದೂಧರ್ಮಕ್ಕೆ ಸೇರಿದ ಹಗಲುವೇಷಗಾರರು, ಮೊಹರಂ ಸಡಗರದಲ್ಲಿ ಬೆರೆತು ಹೋಗಿದ್ದಾರೆ. ಜನ ಜಾತ್ರೆಯೇ ಇಲ್ಲಿ ಸೇರಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X