ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹುಬಲಿ ಮೂರ್ತಿಯ ಮಹಾಮಜ್ಜನಕ್ಕೆ ಕ್ಷಣಗಣನೆ!

By Staff
|
Google Oneindia Kannada News

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಧರ್ಮಸ್ಥಳದಲ್ಲಿ ಬಾಹುಬಲಿ ಮೂರ್ತಿಯ ಮಹಾಮಜ್ಜನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.

ನೃತ್ಯ, ಸಂಗೀತ, ರೂಪಕ, ಯಕ್ಷಗಾನ,ಜಾನಪದ ಕಲೆಯ ಸಮ್ಮಿಲನದೊಂದಿಗೆ 7 ದಿನಗಳ ಸಾಂಸ್ಕೃತಿಕ ಮೇಳ ಭಾನುವಾರ(ಜನವರಿ. 28)ದಿಂದ ಪ್ರಾರಂಭವಾಗಲಿದೆ.

ಸಾಂಸ್ಕೃತಿಕ ಮೇಳದ ಪಟ್ಟಿ

ಜನವರಿ 28 ರಂದು ಖ್ಯಾತ ಕಲಾವಿದೆ ಶೋಭನಾ ಅವರಿಂದ ಭರತನಾಟ್ಯ. ನಂತರ ಅನುರಾಧ ಮತ್ತು ಕವಿತಾ ಪೋಡ್ವಾಲ್‌ ಅವರಿಂದ ಭಕ್ತಿ ಗೀತೆಗಳ ಗಾಯನ.

ಜನವರಿ 29-ಖ್ಯಾತ ಕಲಾವಿದ ದಿ. ಯು.ಎಸ್‌ ಕೃಷ್ಣ ಮೂರ್ತಿ ಅವರ ಮಗ ಯು. ಕೆ. ಪ್ರವೀಣ್‌ ಹಾಗೂ ಅವರ ತಂಡ ಭರತ-ಬಾಹುಬಲಿ ಕಥೆಯ ನೃತ್ಯ ರೂಪಕವನ್ನು ಪ್ರಸ್ತುತಪಡಿಸಲಿದ್ದಾರೆ.

ಜನವರಿ 30-ಯಾಮಿನಿ ಮುತ್ತಯ್ಯ ಅವರಿಂದ ಭರತನಾಟ್ಯ ಹಾಗೂ ಮಾಯಾರಾವ್‌ ಅವರ ತಂಡದಿಂದ ನೃತ್ಯ ರೂಪಕ.
ನಂತರ ಧರ್ಮಸ್ಥಳ ಯಕ್ಷಗಾನ ಮೇಳ ದವರಿಂದ ಯಕ್ಷಗಾನ ರೂಪಕ ಹಾಗೂ ಪ್ರಸಂಗಗಳ ಪ್ರದರ್ಶನ. ಕೊನೆಗೆ ಬೆಂಗಳೂರಿನ ನೃತ್ಯ ಗ್ರಾಮದ ಕಲಾವಿದರಿಂದ ಒಡಿಸ್ಸಿ ನೃತ್ಯ ರೂಪಕ.

ಫೆಬ್ರವರಿ 1-ಸುಗಮ ಸಂಗೀತ ಕಾರ್ಯಕ್ರಮ- ಕಲಾವಿದರು-ಪುತ್ತೂರು ನರಸಿಂಹ ನಾಯಕ್‌, ಅರ್ಚನಾ ಉಡುಪ, ವೈ. ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣ ಮೂರ್ತಿ, ರಮೇಶ್‌ ಚಂದ್ರ, ಪ್ರೇಮಲತಾ ದಿವಾಕರ್‌

ಫೆಬ್ರವರಿ 2 -ಭಾನಮತಿ ಭರತನಾಟ್ಯ ಪ್ರದರ್ಶನ. ನಂತರ ಖ್ಯಾತ ಗಾಯಕ ಎಸ್‌ .ಪಿ. ಬಾಲಸುಬ್ರಮಣ್ಯಂ ಅವರಿಂದ ಗಾಯನ
ಫೆಬ್ರವರಿ 3-ಖ್ಯಾತ ಗಾಯಕ ಹರಿಹರನ್‌ ಹಾಗೂ ಖ್ಯಾತ ಸಾಕ್ಸಫೋನ್‌ ವಾದಕ ಕದ್ರಿ ಗೋಪಾಲ್‌ ನಾಥ್‌ ಅವರ ಜುಗಲ್‌ ಬಂದಿ ಕಾರ್ಯಕ್ರಮ

ಫೆಬ್ರವರಿ 4- ಖ್ಯಾತ ಗಾಯಕ ಉದಿತ್‌ ನಾರಾಯಣ್‌ ಹಾಗೂ ಗುರುಕಿರಣ್‌ ಅವರಿಂದ ಜಂಟಿಯಾಗಿ ಚಿತ್ರ ಸಂಗೀತ ಗೋಷ್ಠಿ. ನಂತರ ‘ಗೀತನಮನ ’ಹಾಗೂ ‘ಜಾನಪದ ವೈಭವ’ ಕಾರ್ಯಕ್ರಮವಿರುತ್ತದೆ.

ಇದಲ್ಲದೆ ಸುಮಾರು 8 ರಾಜ್ಯದ ಕಲಾವಿದರು ಜಾನಪದ ಕಲೆ ಪ್ರದರ್ಶನ ಮಾಡಲಿದ್ದಾರೆ. ಇದರಲ್ಲಿ ಸುಗ್ಗಿ ಕುಣಿತ, ಗುಮ್ಮಟ, ಲಾವಣಿ(ಮಹಾರಾಷ್ಟ್ರ), ಗಜ್ಜಾ, ಹೋಳಿ ನೃತ್ಯ(ಮಧ್ಯ ಪ್ರದೇಶ), ಕಲ್ಬೇಲಿಯಾ, ಬವಾಯಿ ನೃತ್ಯ(ರಾಜಸ್ಥಾನ), ಮಯೂರ ನೃತ್ಯ. ಬಿಹೂ ,ಲಾಥ್‌ ಮಹೋಲಿ ಮತ್ತು ಚಾರ್ಕುಲ ನೃತ್ಯ(ಉತ್ತರ ಪ್ರದೇಶ ಮತ್ತು ಅಸ್ಸಾಂ). ಜತೆಗೆ ಬೆಂಗಾಳದ ‘ಚೆರೊಲಿಯಾ ಪುವಾ’ ನೃತ್ಯದ ರಸದೌತಣವನ್ನು ನೀಡಲು ಕಲಾವಿದರು ಸಜ್ಜಾಗಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X