ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೆಡಿಟ್‌ ಕಾರ್ಡ್‌ ಬಳಸಿ ಕಿಂಗ್‌ ಫಿಷರ್‌ಗೆ ಭಾರಿ ವಂಚನೆ

By Staff
|
Google Oneindia Kannada News

ಮುಂಬಯಿ: ಅಕ್ರಮವಾಗಿ ಕ್ರೆಡಿಟ್‌ ಕಾರ್ಡ್‌ ಬಳಸಿ ಸುಮಾರು 15, 000 ಏರ್‌ ಟಿಕೆಟ್‌ ಬುಕ್ಕಿಂಗ್‌ ಮಾಡಿ ಕಿಂಗ್‌ ಫಿಷರ್‌ ಏರ್‌ ಲೈನ್ಸ್‌ ಕಂಪೆನಿಗೆ ಸುಮಾರು 13 ಕೋಟಿ ರೂ. ವಂಚನೆ ಮಾಡಿದ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ.

ಇದು ಹೇಗೆ ಸಾಧ್ಯ?
ಕ್ರೆಡಿಟ್‌ ಕಾರ್ಡ್‌ನ ಹಿಂಬದಿಯಲ್ಲಿರುವ ಕಸ್ಟ ಮರ್‌ ವೆರಿಫಿಕೇಷನ್‌ ವ್ಯಾಲ್ಯೂ(ಸಿವಿವಿ) ಹಾಗೂ ಕ್ರೆಡಿಟ್‌ ಕಾರ್ಡ್‌ ಬಳಕೆದಾರನ ಹೆಸರು ಬಳಸಿ ಅನ್‌ ಲೈನ್‌ ಮೂಲಕ ಯಾರೂ ಬೇಕಾದರೂ ಶಾಪಿಂಗ್‌, ಟಿಕೆಟ್‌ ಬುಕ್ಕಿಂಗ್‌ ಮಾಡಬಹುದು.

ಇಲ್ಲಿ ಅದದ್ದು ಅದೇ. ಯಾರದ್ದೋ ಕ್ರೆಡಿಟ್‌ ಕಾರ್ಡ್‌ ಬಳಸಿ ಕಿಂಗ್‌ ಫಿಷರ್‌ ಏರ್‌ ಲೈನ್ಸ್‌ ನ ಸುಮಾರು 15,000 ಸಾವಿರ ಟಿಕೆಟ್‌ಗಳನ್ನು ಖರೀದಿಸಲಾಗಿದೆ. ನಂತರ ಟಿಕೆಟ್‌ಗಳನ್ನು ಕಡಿಮೆ ಬೆಲೆಗೆ ಮಾರಲಾಗಿದೆ. ಹೆಚ್ಚಿನ ಹಣವನ್ನು ಐಸಿಐಸಿಐ ಬ್ಯಾಂಕ್‌ನ ಕಾರ್ಡ್‌ ಬಳಸಿ ದುರ್ಬಳಕೆ ಮಾಡಲಾಗಿದೆ.

ಬ್ಯಾಂಕ್‌ಗೆ ತಿಳಿಯಲಿಲ್ಲ ವೇ?
ಕ್ರೆಡಿಟ್‌ ಕಾರ್ಡ್‌ನ ನಿಜ ಮಾಲೀಕನಿಗೆ ಕಿಂಗ್‌ ಫಿಷರ್‌ನಿಂದ ಟಿಕೆಟ್‌ ಖರೀದಿಗಾಗಿ ಬಿಲ್‌ ಬಂದಾಗ , ಬ್ಯಾಂಕ್‌ಗೆ ಹೋಗಿ ವಿಚಾರಿಸಿದ್ದಾನೆ. ಬ್ಯಾಂಕು ಕೂಡ ಯಾವುದೇ ರೀತಿಯ ಹಣ ನೀಡಿಲ್ಲವೆಂದು ವಿವರಣೆ ನೀಡಿದೆ. ಇದರಿಂದ ಕಿಂಗ್‌ಫಿಷರ್‌ಗೆ ಭಾರಿ ನಷ್ಟ ವಾಗಿದೆ.

ಮುಂಬಯಿನ ಅರ್ಥಿಕ ಅಪರಾಧ ವಿಭಾಗದ ಪೊಲೀಸರು ಇಮ್ರಾನ್‌ ಅಹಮ್ಮದ್‌ ಶೇಖ್‌(27) ಎಂಬುವವನನ್ನು ಈ ವಿಷಯವಾಗಿ ಬಂಧಿಸಿದ್ದಾರೆ. ಈತನ ಇತರ ಸಹಚರ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X