ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಕ್ಕೆ ಹಿನ್ನಡೆ : ಮೇ 6ರಂದು ಕಾಮೆಡ್‌-ಕೆ ಸಿಇಟಿ

By Staff
|
Google Oneindia Kannada News

ಬೆಂಗಳೂರು: ಮೇ 6ರಂದು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಕಾಮೆಡ್‌-ಕೆ ಪ್ರಕಟಿಸುವುದರೊಂದಿಗೆ, ಒಂದೇ ಪ್ರವೇಶ ಪರೀಕ್ಷೆ ನಡೆಸುವ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯುಂಟಾಗಿದೆ.

ಮಂಗಳವಾರ(ಜನವರಿ 23) ಕಾಮೆಡ್‌-ಕೆ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ವೃತ್ತಿಪರ ಶಿಕ್ಷಣಾರ್ಥಿಗಳಿಗೆ ಮತ್ತೊಮ್ಮೆ ನಿರಾಸೆ ಉಂಟು ಮಾಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾಮೆಡ್‌-ಕೆ ಕಾರ್ಯದರ್ಶಿಎಸ್‌.ಕುಮಾರ್‌, ನಮ್ಮ ನಿಲುವಿನ ಬಗ್ಗೆ ಸರ್ಕಾರಕ್ಕೆ ಜನವರಿ 5ರಂದು ಸರ್ಕಾರಕ್ಕೆ ಪತ್ರ ಬರೆದು ತಿಳಿಸಿದ್ದೆವು. ಇದಕ್ಕೆ ಸರ್ಕಾರ ಸೂಕ್ತ ಮನ್ನಣೆ ನೀಡದಿದ್ದರಿಂದ ಪ್ರತ್ಯೇಕ ಸಿಇಟಿ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು ಎಂದು ಸಮರ್ಥಿಸಿಕೊಂಡರು.

ಕೆಲವು ವರ್ಷಗಳಿಂದ ಕಾಮೆಡ್‌-ಕೆ ಹಾಗೂ ಸರ್ಕಾರ ಪ್ರತ್ಯೇಕ ಸಿಇಟಿ ನಡೆಸುತ್ತಿದ್ದು, ಇನ್ನು ಮುಂದೆ ಒಂದೇ ಸಿಇಟಿ ನಡೆಸುವ ನಿಟ್ಟಿನಲ್ಲಿ ಸರ್ಕಾರ ಖಾಸಗಿ ಆಡಳಿತ ಮಂಡಳಿಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿತ್ತು. ಆದರೆ ಈ ಕುರಿತು ಒಮ್ಮತ ಮೂಡಿರಲಿಲ್ಲ.

ಅಂದ ಹಾಗೆ ಸರ್ಕಾರಿ ಸಿಇಟಿ ಮೇ 9ರಂದು ಸಿಇಟಿ ನಡೆಯಲಿದೆ. ಕಾಮೆಡ್‌-ಕೆ ಮೇ 6ರಂದೇ ಸಿಇಟಿ ಉತ್ತರಗಳನ್ನೂ ಪ್ರಕಟಿಸಲಾಗುವುದು ಎಂದು ಹೇಳಿದೆ.

ಉನ್ನತ ಶಿಕ್ಷಣ ಸಚಿವ ಡಿ.ಎಚ್‌.ಶಂಕರಮೂರ್ತಿ ಮಾತ್ರ ಒಂದೇ ಸಿಇಟಿ ನಡೆಸುವ ಬಗ್ಗೆ ಇನ್ನೂ ಆಶಾಭಾವನೆ ಹೊಂದಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X