ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ-ಹರಿಹರ ನೇರ ರೈಲು:ಕನಸೋ.. ನನಸೋ

By Staff
|
Google Oneindia Kannada News

ಶಿವಮೊಗ್ಗ : ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ದೂರದರ್ಶಿತ್ವ ಹಾಗೂ ನಗರ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶಕ್ಕೆ ಕೊಂಡೊಯ್ಯುವ ಯೋಜನೆ(ಪಿಯುಅರ್‌ಎ) ಮೇಲೆ ನಂಬಿಕೆ ಇಟ್ಟಿರುವ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಹಲವರ ಕನಸನ್ನು ನನಸು ಮಾಡುವತ್ತ ಹೆಜ್ಜೆ ಹಾಕಿದ್ದಾರೆ.

ಶಿವಮೊಗ್ಗ ಹಾಗೂ ಹರಿಹರ ನಡುವೆ ನೇರ ರೈಲ್ವೆ ಸಂಪರ್ಕ ಒದಗಿಸುವ ಬಗ್ಗೆ ಅಧ್ಯಯನ ನಡೆಸಿರುವ ವಿದ್ಯಾರ್ಥಿಗಳ ತಂಡ ಫಲಿತಾಂಶ ನೀಡುವ ಹಂತದಲ್ಲಿದ್ದಾರೆ. ಡಾ. ಬಿ.ಸಿ. ಪಾಟೀಲ್‌ ಅವರ ನೇತೃತ್ವದ ತಂಡದಲ್ಲಿ ಸುಮಾರು 70 ವಿದ್ಯಾರ್ಥಿಗಳು ಸಂಶೋಧನೆಯ ಅಂಗವಾಗಿ ಸ್ಥಳೀಯ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಉದ್ದೇಶಿತ ಈ ಯೋಜನೆಗೆ ಎಲ್ಲಾ ರೀತಿಯ ನೆರವು ನೀಡಲು ಮುಂದಾಗಿದ್ದಾರೆ.

ಸುಮಾರು 70 ಕಿ.ಮೀ. ಅಂತರವಿರುವ ಶಿವಮೊಗ್ಗ ಹಾಗೂ ಹರಿಹರ ರೈಲ್ವೆ ಹಳಿಗಳಿಗೆ ಜೀವ ಬಂದರೆ, ಶಿವಮೊಗ್ಗದಿಂದ ಹುಬ್ಬಳ್ಳಿ, ಮಿರಾಜ್‌, ಪುಣೆ, ಮುಂಬಯಿ, ಹೊಸಪೇಟೆ, ಬಳ್ಳಾರಿ, ಹೈದರಾಬಾದ್‌, ವಿಜಯವಾಡ ಮುಂತಾದ ಪ್ರಮುಖ ಸ್ಥಳಗಳಿಗೆ ನೇರ ಸಂಪರ್ಕ ಒದಗಿಸಿದಂತಾಗುತ್ತದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X