ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಕಟ್ಟಡ ಪತ್ತೆಗೆ ಉಪಗ್ರಹ ಸೇವೆ :ಕಪಿಲ್‌ ಸಿಬಾಲ್‌

By Staff
|
Google Oneindia Kannada News

ಹೈದರಾಬಾದ್‌ : ಅಕ್ರಮ ಕಟ್ಟಡ ನಿರ್ಮಾಣವನ್ನು ಸುಲಭವಾಗಿ ಕಂಡುಹಿಡಿಯಲು, ಉಪಗ್ರಹ ನೆರವನ್ನು ಪಡೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಅಕ್ರಮವಾಗಿ ಭೂಮಿಯನ್ನು ಒತ್ತುವರಿ ಮಾಡಿ, ಕಟ್ಟಡ ನಿರ್ಮಿಸುವವರನ್ನು ಪತ್ತೆ ಹಚ್ಚಲು ಉಪಗ್ರಹ ಸೇವೆಯನ್ನು ಬಳಸಿಕೊಳ್ಳಬಹುದು. ಅದು ರವಾನಿಸುವ ಹೈಟೆಕ್‌ ಚಿತ್ರಗಳಿಂದ, ಅಕ್ರಮಗಳು ಬಯಲಾಗುತ್ತವೆ. ಕಚೇರಿಯಲ್ಲಿ ಕುಳಿತೇ, ಗಣಕದಲ್ಲಿ ಅಕ್ರಮ ಕಟ್ಟಡಗಳನ್ನು ವೀಕ್ಷಿಸಬಹುದು.

ಇಂತಹ ವ್ಯವಸ್ಥೆಯನ್ನು ನವದೆಹಲಿಯಲ್ಲಿ ಮುಂದಿನ ವರ್ಷದೊಳಗಾಗಿ ಬಳಸಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಕಪಿಲ್‌ ಸಿಬಾಲ್‌ ಹೇಳಿದ್ದಾರೆ.

ಇತ್ತೀಚೆಗೆ ಅಕ್ರಮ ಕಟ್ಟಡಗಳ ತೆರವುಗೊಳಿಸುವುದು ಕರ್ನಾಟಕ ಸರ್ಕಾರಕ್ಕೆ ಮಾತ್ರವಲ್ಲ, ದೆಹಲಿ ಸರ್ಕಾರಕ್ಕೂ ತಲೆಬಿಸಿ ತಂದಿತ್ತು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X