ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲೆಯನ್ಸ್‌ ಜಂಗಮಗಂಟೆಯಲ್ಲಿ ಯಾಹೂ ಮೆಸ್ಸೆಂಜರ್‌!

By Staff
|
Google Oneindia Kannada News

ಮುಂಬಯಿ : ಅಂತರ್ಜಾಲದಲ್ಲಿ ಮೆಸ್ಸೆಂಜರ್‌ ಮೂಲಕ ಹೆಸರು ಮಾಡಿರುವ ಯಾಹೂ ಇಂಡಿಯಾ ಸಂಸ್ಥೆ, ಈಗ ರಿಲೆಯನ್ಸ್‌ ಕಮ್ಯೂನಿಕೇಷನ್ಸ್‌ ಜತೆ ಒಪ್ಪಂದ ಮಾಡಿಕೊಂಡಿದೆ.

ತ್ವರಿತವಾಗಿ ಸಂದೇಶ ಕಳಿಸಲು ಬಳಸುವ ಯಾಹೂ ಇನ್‌ಸ್ಟೆಂಟ್‌ಮೆಸ್ಸೆಂಜರ್‌(ಐಎಂ) ಇನ್ನು ಮುಂದೆ ರಿಲೆಯನ್ಸ್‌ ಮೊಬೈಲ್‌ಗಳಲ್ಲಿ ಲಭ್ಯವಾಗಲಿದೆ. ಈ ಸೇವೆಗೆ ನಿಮ್ಮ ಮೊಬೈಲ್‌ನಲ್ಲಿ ಜಾವಾ, ವ್ಯಾಪ್‌(ಡಿಚಟ) ತಂತ್ರಾಶ ಇರಬೇಕು(ನೋಕಿಯಾ ವರ್ಣ ಹ್ಯಾಂಡ್‌ಸೆಟ್‌ಗಳಲ್ಲಿ ಈ ಸೌಲಭ್ಯವಿದೆ).

ಪ್ರಯೋಜನ : ಒಂದು ರಿಲೆಯನ್ಸ್‌ ಮೊಬೈಲ್‌ನಿಂದ ಇನ್ನೊಂದು ರಿಲೆಯನ್ಸ್‌ ಮೊಬೈಲ್‌ ಜತೆ ಅಥವಾ ಇನ್ನೊಂದು ಗಣಕದ ಜತೆ ಚಾಟ್‌ ಮಾಡಬಹುದು. ಯಾಹೂ ಮೆಸ್ಸೆಂಜರ್‌(ಐಎಂ)ನಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಈಗ ಮೊಬೈಲ್‌ನಲ್ಲೇ ಲಭ್ಯವಾಗಲಿದೆ.

ಈ ಮುಂಚೆ ಕೂಡ ರಿಲೆಯನ್ಸ್‌ ಜತೆಗೆಯಾಹೂ ಸಂಸ್ಥೆ ಕೈ ಜೋಡಿಸಿತ್ತು. ಯಾಹೂ ಮೇಲ್‌ ಅನ್ನು ರಿಲೆಯನ್ಸ್‌ ಮೊಬೈಲ್‌ನ ಗ್ರಾಹಕರಿಗೆ ಪರಿಚಯಿಸಿ ಈಗಾಗಲೇ 2 ವರ್ಷಗಳೇ ಕಳೆದಿವೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X