ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಇಂದು ಇನ್ನೊಂದು ಗರಿ!

By Staff
|
Google Oneindia Kannada News

ಶ್ರೀಹರಿಕೋಟಾ : ಬಾಹ್ಯಾಕಾಶ ಕೋಶ(ಸ್ಪೇಸ್‌ ಕ್ಯಾಪ್ಸೂಲ್‌ ರಿಕವರಿ ಎಕ್ಸ್‌ಪೆರಿಮೆಂಟ್‌-1) ಪ್ರಯೋಗ ಯಶಸ್ವಿಯಾಗಿದೆ. ಆ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಗೆ ಇನ್ನೊಂದು ಯಶಸ್ಸಿನ ಗರಿ ಮೂಡಿದೆ.

ಈ ಬಾಹ್ಯಾಕಾಶ ಕೋಶ ಸೋಮವಾರ ಬೆಳಗ್ಗೆ 9.44ರಲ್ಲಿ ಬಂಗಾಲ ಕೊಲ್ಲಿ ತಲುಪಿದೆ. ಕಳೆದ 12ದಿನಗಳ ಹಿಂದಷ್ಟೇ ಪಿಎಸ್‌ಎಲ್‌ವಿ-ಸಿ7ರಲ್ಲಿ ನಾಲ್ಕು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿತ್ತು. ಅವುಗಳಲ್ಲಿದ್ದ 550 ಕಿಲೋ ತೂಕದ ಕೋಶವನ್ನು ಈಗ ವಾಪಸ್‌ ಧರೆಗೆ ತರಲಾಗಿದೆ.

ಇಂತಹ ತಂತ್ರಜ್ಞಾನವನ್ನು ಹೊಂದಿರುವ ಅಮೆರಿಕಾ, ರಷ್ಯಾ, ಚೀನಾಗಳ ಸಾಲಿನಲ್ಲಿ ಭಾರತಕ್ಕೀಗ ಸ್ಥಾನ ದೊರೆತಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X