ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಿ ಸಾಕೋದು ಬಲುಕಷ್ಟ ಅನ್ನಿಸಿದರೆ,ಇ-ಡಾಗ್‌ ಸಾಕಿ!

By Staff
|
Google Oneindia Kannada News

ಕಣ್ಣೂರು(ಕೇರಳ) : ಇನ್ನು ಮುಂದೆ ಮನೆ ಕಾಯಲಿಕ್ಕೆ ನಾಯಿಗಳನ್ನು ಸಾಕಬೇಕಿಲ್ಲ. ಕಳ್ಳರನ್ನು ಓಡಿಸಲು ಇ-ಡಾಗ್‌ ಬಂದಿದೆ!

ಕೇರಳದ ಕಣ್ಣೂರು ಮೂಲದ ಪಿ.ಕೆ. ಪ್ರದೀಪ್‌ ಕುಮಾರ್‌ ತಯಾರಿಸಿರುವ ಇ-ಡಾಗ್‌, ಸಾಮಾನ್ಯ ನಾಯಿಗಳಂತೆ ಬೊಗಳುವ ಜತೆಗೆ ಮನೆಯ ಹೊರಗಿನ ದೀಪ ಹತ್ತಿಸಿ, ಹೊರಗಿನವರ ಚಲನವಲನಗಳನ್ನು ಗುಪ್ತ ಕೆಮರಾ ಮೂಲಕ ಸೆರೆಹಿಡಿಯುತ್ತದೆ. ಇ-ಡಾಗ್‌ನಿಂದಾಗಿ ಒಳಗಿನಿಂದಲೇ, ಹೊರಗಡೆ ಬಂದಿರುವವರನ್ನು ಟೀವಿ ಪರದೆ ಮೇಲೆ ನೋಡಿ ಗುರುತಿಸಬಹುದಾಗಿದೆ.

ಇ-ಡಾಗ್‌ ಕಾರ್ಯ ವಿಧಾನ :
ಈ ವ್ಯವಸ್ಥೆಯಲ್ಲಿ ಇನ್‌ಫ್ರಾರೆಡ್‌ ಸೆನ್ಸರ್‌ಗಳನ್ನು ಮನೆಯ ಮೇಲೆ ಅಳವಡಿಸಲಾಗುತ್ತದೆ. ಉಪಕರಣದ ಸೆನ್ಸರ್‌ 90 ಮೀಟರ್‌ ವ್ಯಾಪ್ತಿಯಲ್ಲಿ ಯಾವುದಾದರೂ ಚಲನೆಯನ್ನು ಗ್ರಹಿಸಿದಾಗ, ಇ-ಡಾಗ್‌ ಬೊಗಳಲು ಶುರುಮಾಡುತ್ತದೆ.

ಒಂದು ನಿಮಿಷದ ತನಕ ಬೊಗಳಿಕೆ ಸಾಗುತ್ತದೆ. ಮಾಲೀಕ ಬೇಕಾದರೆ ರಿಮೋಟ್‌ ಕಂಟ್ರೋಲರ್‌ ಮುಖಾಂತರ ಬೊಗಳಿಕೆಯನ್ನು ನಿಲ್ಲಿಸಬಹುದು. ಸುಮಾರು 4,500ರೂ. ವೆಚ್ಚದ ಇ-ಡಾಗ್‌ ಸಂಪೂರ್ಣವಾಗಿ ವಿದ್ಯುಚ್ಛಕ್ತಿ ಅಧಾರಿತವಾಗಿದೆ. ರೀ-ಚಾರ್ಜೆಬಲ್‌ ಬ್ಯಾಟರಿ ಮುಖಾಂತರ ಕೂಡ 4 ದಿನ ಬಳಸಬಹುದು.

ಪ್ರಸ್ತುತ ಈ ವ್ಯವಸ್ಥೆಯನ್ನು ಕೇರಳದ ಶಬರಿಮಲೆ ಹಾಗೂ ಗುರುವಾಯೂರು ದೇವಾಲಯಗಳಲ್ಲಿ ಬಳಸಲಾಗುತ್ತಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X