ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.23ಕ್ಕೆ ಎಚ್‌ಐವಿ ಸೋಂಕಿತರ ಮನೆಯಲ್ಲಿ ಸಿಎಂ ವಾಸ್ತವ್ಯ

By Staff
|
Google Oneindia Kannada News

ಮುಧೋಳ : ಇಂಗಳಗಿ-ಯಡಹಳ್ಳಿ ಗ್ರಾಮದ ಎಚ್‌ಐವಿ ಪೀಡಿತ ಕುಟುಂಬದ ಮನೆಯಾಂದರಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಸ್ತವ್ಯ ಹೂಡಲಿದ್ದಾರೆ.

ಶೇಕಡಾ 40ರಷ್ಟು ಎಚ್‌ಐವಿ ಪೀಡಿತರು ಈ ಗ್ರಾಮದಲ್ಲಿದ್ದಾರೆ ಎಂದು ಸರ್ಕಾರೇತರ ಸಂಸ್ಥೆಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಗ್ರಾಮ ಆರೋಗ್ಯ ಸಮಿತಿ, ತಾಲ್ಲೂಕು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಸೇರಿದಂತೆ ಏಡ್ಸ್‌ ನಿಯಂತ್ರಣ ಸಂಸ್ಥೆಗಳು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಇದೆಲ್ಲ ಮಾಹಿತಿ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಇದೇ ಗ್ರಾಮವನ್ನು ತಮ್ಮ ವಾಸ್ತವ್ಯಕ್ಕೆ ಆಯ್ಕೆಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರುದ್ರಯ್ಯ ಬಸಯ್ಯ ಮಠಪತಿ ಹಾಗೂ ಶೋಭಾ ರುದ್ರಯ್ಯ ಮಠಪತಿ ದಂಪತಿಗಳ ಮನೆಯಲ್ಲಿ ವಾಸ್ತವ್ಯ ಕುಮಾರಸ್ವಾಮಿ ಹೂಡಲಿದ್ದಾರೆ. ಈ ದಂಪತಿಗಳಿಗೆ ಮೂವರು ಮಕ್ಕಳಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X