ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ದೇಶದ ಹೊಸ ವರಸೆಯಿಂದ ಅಮೆರಿಕಕ್ಕೆ ಆತಂಕ!

By Staff
|
Google Oneindia Kannada News

ನ್ಯೂಯಾರ್ಕ್‌ : ದೂರಗಾಮಿ ಕ್ಷಿಪಣಿಗಳನ್ನು ಪ್ರಯೋಗಿಸಿ ಶತ್ರು ದೇಶದ ಮೇಲೆ ದಾಳಿ ಮಾಡುವುದು ಈಗ ಹಳೆಯ ಸಂಗತಿ. ಹೊಸ ಸಂಗತಿ ಏನೆಂದರೆ, ಚೀನಾ ತಯಾರಿಸಿರುವ ಕ್ಷಿಪಣಿಯ ಮೂಲಕ ಉಪಗ್ರಹಗಳನ್ನು ಚಿಂದಿ ಮಾಡಬಹುದು!

ಇತ್ತೀಚೆಗೆ ಚೀನಾ ಖಂಡಾಂತರ ಕ್ಷಿಪಣಿಯನ್ನು ಪ್ರಯೋಗಿಸಿ, ತನ್ನದೇ ಅದ ಒಂದು ಉಪಗ್ರಹವನ್ನು ಧ್ವಂಸಗೊಳಿಸಿ ತನ್ನ ಪ್ರಯೋಗದಲ್ಲಿ ಯಶಸ್ಸು ಗಳಿಸಿದೆ. ಇಂತಹ ಕ್ಷಿಪಣಿಯ ಮೂಲಕ ನಿರ್ದಿಷ್ಟ ಎತ್ತರದಲ್ಲಿರುವ ಯಾವುದೇ ದೇಶದ ಉಪಗ್ರಹವನ್ನು ಸುಲಭವಾಗಿ ಧ್ವಂಸ ಮಾಡಬಹುದು. ಈ ಮೂಲಕ ಅ ರಾಷ್ಟ್ರದ ವ್ಯವಸ್ಥೆಯನ್ನು ಬುಡಮೇಲುಗೊಳಿಸಬಹುದಾಗಿದೆ.

ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಈ ಪ್ರಯೋಗವನ್ನು ನಡೆಸಿರುವ ಚೀನಾ ಧೋರಣೆಗೆ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಅತಂಕ ವ್ಯಕ್ತಪಡಿಸಿವೆ. ಇದು ಹೊಸ ಮಾದರಿಯ ಸಮರಕ್ಕೆ ನಾಂದಿಯಾಡುವ ಸಾಧ್ಯತೆಗಳಿವೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X