ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ನೊಬೆಲ್‌ ವಿಜೇತ ವಿಜ್ಞಾನಿಗಳಿಗೆ ಭಾರತದ ಆಹ್ವಾನ

By Staff
|
Google Oneindia Kannada News

ನವದೆಹಲಿ : ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಹ್ವಾನದ ಮೇರೆಗೆ, ಯುರೋಪಿನ ನೊಬೆಲ್‌ ವಿಜೇತ 30 ವಿಜ್ಞಾನಿಗಳು ಫೆಬ್ರವರಿಯಲ್ಲಿ ಭಾರತಕ್ಕೆ ಅಗಮಿಸಲಿದ್ದಾರೆ.

ಈಗಾಗಲೇ ವಿಜ್ಞಾನಿಗಳಿಗೆ ಅಹ್ವಾನ ನೀಡುವ ಕೆಲಸವನ್ನು ಅರಂಭಿಸಲಾಗಿದೆ. 10 ಜನ ವಿಜ್ಞಾನಿಗಳು ಫೆಬ್ರವರಿ 7 ಮತ್ತು 8 ರಂದು ಬರುವ ನಿರೀಕ್ಷೆಯಿದೆ ಎಂದು ವಿಜ್ಞಾನ ಮತು ತಂತ್ರಜ್ಞಾನ ಕಾರ್ಯದರ್ಶಿ ಟಿ. ರಾಮಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಫೆಬ್ರವರಿ 8ರಂದು ನಡೆಯುವ ವಿಜ್ಞಾನಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಸುಮಾರು 500 ಜನ ಸಂಶೋಧನ ವಿದ್ಯಾರ್ಥಿಗಳು, 500 ಜನ ಶಾಲಾ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ವಿಜ್ಞಾನಿಗಳ ಜತೆಗಿನ ಸಂವಾದದ ಕಾರ್ಯಕ್ರಮವನ್ನು ಅಂತರ್ಜಾಲ ತಾಣದ ಮೂಲಕ ವಿಶ್ವದೆಲ್ಲೆಡೆಗೆ ಪ್ರಸಾರ ಮಾಡಲಾಗುವುದು ಎಂದು ರಾಮಸ್ವಾಮಿ ಮಾಹಿತಿ ನೀಡಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X