ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು : ಮೂವರು ಕಾಶ್ಮೀರಿಗಳ ಮೇಲೆ ಸಂಶಯ

By Staff
|
Google Oneindia Kannada News

ರಾಯಚೂರು : ಸಂಶಯಾಸ್ಪದ ನಡತೆಯನ್ನು ಗಮನಿಸಿ, ಮೂವರು ಕಾಶ್ಮೀರಿ ಯುವಕರನ್ನು ಜಿಲ್ಲಾ ಪೊಲೀಸರು ಬಂಧಿಸಿ, ಶನಿವಾರ ವಿಚಾರಣೆ ನಡೆಸಿದ್ದಾರೆ.

ಹಂಪಿಯಲ್ಲಿ ನೆಲೆಸಿದ್ದ ಈ ಕಾಶ್ಮೀರಿ ಯುವಕರು, ತಮ್ಮ ವಿಳಾಸ ಮತ್ತಿತರ ಮಾಹಿತಿ ನೀಡುವಲ್ಲಿ ಶಂಕೆಗೆ ಕಾರಣವಾಗುವಂತೆ ವರ್ತಿಸಿದ್ದಾರೆ. ಈ ಯುವಕರನ್ನು ಗುಲಾಮ್‌ ನಬಿ, ಮಹಮ್ಮದ್‌ ಶಕೀಲ್‌, ಮುರಾಫ್‌ ಹುಸೇನ್‌ ಎಂದು ಪೊಲೀಸರು ಗುರ್ತಿಸಿದ್ದಾರೆ.

ಸ್ಥಳೀಯರು ನೀಡಿದ ದೂರಿನನ್ವಯ ಲಿಂಗಸ್ಗೂರು ತಾಲೂಕಿನ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಇನ್ನೊಂದು ಕಡೆ, ಇತ್ತೀಚೆಗಷ್ಟೇ ಬಂಧಿಸಲ್ಪಟ್ಟಿರುವ ಶಂಕಿತ ಉಗ್ರ ಇಮ್ರಾನ್‌ನನ್ನು, ಶನಿವಾರ ಬೆಂಗಳೂರಿನ ವಿಧಿ ವಿಜ್ಞಾನ ಕೇಂದ್ರದಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X