ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್‌ಎಲ್‌ವಿ-ಸಿ7 ಯಶಸ್ವಿ ಉಡಾವಣೆ : ಇಸ್ರೋ ಹರ್ಷ

By Staff
|
Google Oneindia Kannada News

India successfully launches PSLV-C7ಶ್ರೀಹರಿಕೋಟಾ : ಸತೀಶ್‌ ಧವನ್‌ ಅಂತರಿಕ್ಷ ಕೇಂದ್ರದಿಂದ ಬುಧವಾರ ಬೆಳಗ್ಗೆ ಸುಮಾರು 9:23ರಲ್ಲಿ, ನಾಲ್ಕು ಉಪಗ್ರಹಗಳನ್ನು ಹೊತ್ತ ಉಪಗ್ರಹ ಉಡಾವಣಾ ವಾಹನ(ಪಿಎಸ್‌ಎಲ್‌ವಿ-ಸಿ7)ವನ್ನು ಯಶಸ್ವಿಯಾಗಿ ಉಡಾಯಿಸಲಾಯಿತು.

ಇಂಡೋನೇಷ್ಯದ ಭೂನಿರೀಕ್ಷಣ ಉಪಗ್ರಹ, ಅರ್ಜೆಂಟಿನಾದ 6ಕೆ.ಜಿ ತೂಕದ ಪುಟ್ಟ ನ್ಯಾನೋ ಉಪಗ್ರಹ, 680ಕೆ.ಜಿ ತೂಕದ ಭಾರತೀಯ ದೂರಸಂವೇದಿ ಉಪಗ್ರಹ ಕಾರ್ಟೊಸ್ಯಾಟ್‌ ಹಾಗೂ 550ಕೆ.ಜಿ ತೂಕದ ಮರುಬಳಕೆ ಮಾಡಬಲ್ಲಂತ ಉಪಗ್ರಹವನ್ನು ಪಿಎಸ್‌ಎಲ್‌ವಿ-ಸಿ7 ತನ್ನ ಜೊತೆ ಕೊಂಡೊಯ್ತಿದೆ ಎಂದು ಇಸ್ರೋ ತಿಳಿಸಿದೆ.

ನಗರ ಹಾಗೂ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ನಿರ್ವಹಣೆ, ಭೂ ಸಂಬಂಧಿತ ಮಾಹಿತಿಗಾಗಿ ಈ ಉಪಗ್ರಹಗಳು ಬಳಕೆಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಜಿ. ಮಾಧವನ್‌ ನಾಯರ್‌ ಹೇಳಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X