ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಟಿಂಗ್‌ ಸುಳ್ಳರ ಪತ್ತೆಗೆ ಕಿಶ್‌ಕಿಶ್‌ ತಂತ್ರಾಂಶ!

By Staff
|
Google Oneindia Kannada News


ಬಿಎಟಿಎಂ ಕಮ್ಯೂನಿಕೇಷನ್‌ ಎಂಬ ಸಂಸ್ಥೆಯಾಡನೆ ಕೈಜೋಡಿಸಿರುವ ಸ್ಕೈಪಿ ಸಂಸ್ಥೆ ‘ಕಿಶ್‌ಕಿಶ್‌ ಅನ್‌ಲೈನ್‌ ಲೈ ಡಿಟೇಕ್ಟರ್‌’ನ್ನು ಉಚಿತವಾಗಿ ನೀಡುತ್ತಿದೆ. ಆಸಕ್ತರು ಪರೀಕ್ಷಿಸಬಹುದು.

Free Internet lie detector from Skypeನೀವು ಇಂಟರ್‌ನೆಟ್‌ನಲ್ಲಿ ಚಾಟ್‌ ಮಾಡುವಾಗ ನಿಮ್ಮೊಡನೆ ಚಾಟ್‌ ಮಾಡುತ್ತಿರುವ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ/ಳೆ ಎಂದು ನಿಮಗೆಂದಾದರೂ ಅನ್ನಿಸಿದೆಯೇ? ಅನ್ನಿಸಿದ್ದರೂ ಹೇಗೆ ಕಂಡು ಹಿಡಿಯೋದು, ತುಂಬಾ ಕಷ್ಟ ಅಂತೀರಾ. ಇನ್ನುಮುಂದೆ ನಿಮ್ಮ ಕಷ್ಟ ದೂರವಾಗಲಿದೆ! ‘ಕಿಶ್‌ಕಿಶ್‌’ ತಂತ್ರಾಂಶದ ದೆಸೆಯಿಂದ ಸುಳ್ಳುಗಾರರನ್ನು ಪತ್ತೆ ಮಾಡಬಹುದು.

ಪಾಲಿಗ್ರಾಫಿ ಪರೀಕ್ಷೆಗೆ ಒಳಪಡಿಸಿ ಸುಳ್ಳುಗಾರರನ್ನು ಕಂಡು ಹಿಡಿಯುವ ವಿಧಾನ ಈಗ ಎಲ್ಲರಿಗೂ ಚಿರಪರಿಚಿತ. ಇದೇ ರೀತಿ ಅಂತರ್ಜಾಲದ ಸುಳ್ಳರ ಬಣ್ಣವನ್ನು, ಕಿಶ್‌ಕಿಶ್‌ ತಂತ್ರಾಂಶ ಬಯಲು ಮಾಡಲಿದೆ. ಪಾಲಿಗ್ರಾಫಿ ಜೊತೆಗೆ ಬೈನ್‌ ಮ್ಯಾಪಿಂಗ್‌, ನಾರ್ಕೋ ಅನಾಲಿಸಿಸ್‌ ಮುಂತಾದ ಮೆಡಿಕಲ್‌ ಪದಗಳು ಈಗ ಜನ ಸಾಮಾನ್ಯರ ಬಾಯಲ್ಲೂ ಕೇಳಿಬರುತ್ತಿವೆ. ಈ ಪಟ್ಟಿಗೆ ಕೆಲವೇ ದಿನಗಳಲ್ಲಿ ಕಿಶ್‌ಕಿಶ್‌ ಸೇರಿಕೊಳ್ಳಲಿದೆ!

ಅಂತರ್ಜಾಲದಲ್ಲಿ ಚಾಟಿಂಗ್‌ ಹಾಗೂ ದೂರ ದೇಶಗಳಿಗೆ ಕರೆ ಮಾಡುವವರಿಗೆ ಸ್ಕೈಪಿ ಅಥವಾ ಸ್ಕೈಪ್‌ ಚಿರಪರಿಚಿತ. ಬಿಎಟಿಎಂ ಕಮ್ಯೂನಿಕೇಷನ್‌ ಎಂಬ ಸಂಸ್ಥೆಯಾಡನೆ ಕೈಜೋಡಿಸಿರುವ ಸ್ಕೈಪಿ ಸಂಸ್ಥೆ ‘ಕಿಶ್‌ಕಿಶ್‌ ಅನ್‌ಲೈನ್‌ ಲೈ ಡಿಟೇಕ್ಟರ್‌’ನ್ನು ಉಚಿತವಾಗಿ ನೀಡುತ್ತಿದೆ.

ಕಿಶ್‌ಕಿಶ್‌ ಹೇಗೆ ಕೆಲಸ ಮಾಡುತ್ತದೆ?

ಬಿಎಟಿಎಂ ಸಂಸ್ಥೆ ಯ ಉತ್ಪನ್ನವಾದ ಕಿಶ್‌ಕಿಶ್‌ ಲೈ ಡಿಟೇಕ್ಟರ್‌ ಮೂಲಕ ನೇರ ಪಾಲಿಗ್ರಾಫಿಯನ್ನು ಸಾಧಿಸಬಹುದಾಗಿದೆ. ಈ ಉಪಕರಣವು ವ್ಯಕ್ತಿ ಮಾತನಾಡುವಾಗ ಉಂಟಾಗುವ ಒತ್ತಡವನ್ನು ಅಳೆಯುತ್ತದೆ. 15 ಸೆಕೆಂಡ್‌ ಮಾತಾಡಿದರೆ ಸಾಕು, ಅ ವ್ಯಕ್ತಿಯ ಧ್ವನಿಯಲ್ಲಿನ ಒತ್ತಡವನ್ನು ಅಳೆಯುತ್ತದೆ. ಆತ ಸುಳ್ಳು ಹೇಳುತ್ತಿದ್ದರೆ, ಹಸಿರು ಹಾಗೂ ಕೆಂಪು ದೀಪ ಹತ್ತಿಕೊಳ್ಳುತ್ತದೆ.

‘ಈಗಾಗಲೇ ಈ ಉಪಕರಣದ ಕಾರ್ಯಕ್ಷಮತೆಯನ್ನು ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಸಂಭಾಷಣೆ ಮೇಲೆ ಪ್ರಯೋಗಿಸಲಾಗಿದೆ. ‘ನಾನು ಮೊನಿಕಾ ಜತೆ ದೈಹಿಕ ಸಂಬಂಧ ಹೊಂದಿಲ್ಲ’ ಎಂದು ಕ್ಲಿಂಟನ್‌ ಹೇಳಿದಾಗ ಸುಳ್ಳು ಹೇಳುತ್ತಿರುವುದಾಗಿ ನಮ್ಮ ಉಪಕರಣ ಸೂಚಿಸಿತ್ತು’ ಎಂದು ಕಿಶ್‌ಕಿಶ್‌ನ ಉತ್ಪಾದಕರು ಹೇಳುತ್ತಾರೆ.

ಉಪಕರಣವೇನೋ ಉಪಯೋಗಕ್ಕೆ ಬರುವಂತದ್ದೆ. ಅದರೆ ಅದರ ಉಪಯೋಗ ಸರಿಯಾದ ರೀತಿಯಲ್ಲಿ, ಸರಿಯಾದವರ ಮೇಲೆ ಪ್ರಯೋಗಿಸಿದರೆ ಒಳಿತು ಏನಂತೀರಾ?

ಹೆಚ್ಚಿನ ವಿವರಗಳಿಗೆ ಗಮನಿಸಿ - http://www.kishkish.com/

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X