ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಹರದ ಗಡಿಗ್ರಾಮದಲ್ಲಿ 80 ಅಮೂಲ್ಯ ಹಸ್ತಪ್ರತಿ ಪತ್ತೆ

By Staff
|
Google Oneindia Kannada News

ಹರಿಹರ : ಸುಮಾರು 500 ವರ್ಷಗಳಿಗೂ ಹಿಂದಿನ 80ಕ್ಕೂ ಹೆಚ್ಚು ಅಮೂಲ್ಯ ಹಸ್ತಪ್ರತಿಗಳು, ತಾಲೂಕಿನ ಗಡಿಗ್ರಾಮವೊಂದರಲ್ಲಿ ದೊರೆತಿವೆ.

ಈ ಹಸ್ತಪ್ರತಿಗಳು ಕಾವ್ಯ, ವೈದ್ಯಕೀಯ ವಿಜ್ಞಾನ, ಗಣಿತಶಾಸ್ತ್ರ ಹಾಗೂ ಆಯುರ್ವೇದಕ್ಕೆ ಸಂಬಂಧಿಸಿವೆ. ತಿಮ್ಮನಕಟ್ಟೆ ಗ್ರಾಮದ ಹವ್ಯಾಸಿ ಜಾನಪದ ಸಂಶೋಧಕ ಎಚ್‌.ಜಿ.ದುಂಡ್ಯಪ್ಪ ಬಳಿ ಹಸ್ತಪ್ರತಿಗಳಿವೆ. ಅವರು ದಾವಣಗೆರೆಯಲ್ಲಿನ ವಿವಿಧ ಧರ್ಮದ ಮಠಗಳು ಹಾಗೂ ಮನೆಗಳಿಂದ ಹಸ್ತಪ್ರತಿಗಳ ಸಂಗ್ರಹಿಸಿದ್ದಾರೆ.

ಒಂದು ಹಸ್ತಪ್ರತಿಯಂತೂ ಸುಮಾರು 10ಅಡಿ ಉದ್ದವಿದ್ದು, ಆದಿಜಾಂಬವ ಎಂಬ ದಲಿತ ಸಮುದಾಯದ ಮೇಲೆ ಬೆಳಕು ಚೆಲ್ಲುತ್ತದೆ. ಕನಿಷ್ಠ ಆರು ಅಂಗುಲದಿಂದ ಹಿಡಿದು 400ಪುಟಗಳವರೆಗೆ ವಿವಿಧ ಆಕಾರ ಗಾತ್ರಗಳಲ್ಲಿರುವ ಹಸ್ತಪ್ರತಿಗಳನ್ನು ಸಂಗ್ರಹಿಸಿರುವುದಾಗಿ ದುಂಡ್ಯಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X