• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಣೆ ಪ್ರವಾಸ : ಬಿಜೆಪಿ ಶಾಸಕರ ಮೇಲೆ ಹುಸಿ ಬ್ರಹ್ಮಾಸ್ತ್ರ!

By Staff
|

ಹುಬ್ಬಳ್ಳಿ : ಜಾತ್ಯತೀತ ಜನತಾದಳ ಶಾಸಕರೊಂದಿಗೆ ಪುಣೆ ವಿಹಾರದಲ್ಲಿ ಪಾಲ್ಗೊಂಡ ಭಾರತೀಯ ಜನತಾ ಪಕ್ಷದ ಶಾಸಕರ ಮೇಲೆ ಅಗತ್ಯಬಿದ್ದರೆ ಸೂಕ್ತಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪುಣೆ ವಿಹಾರ ಸಂದರ್ಭದಲ್ಲಿ ಬಿಜೆಪಿ ಶಾಸಕರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಜನಪ್ರತಿನಿಧಿಗಳಾಗಿ ಭೇಟಿಯಾಗಿದ್ದರೆ ಸಮಸ್ಯೆ ಇಲ್ಲ. ಜನವರಿ 11ರಂದು ಅವರನ್ನು ಭೇಟಿಯಾಗಿ ಇದರ ಬಗ್ಗೆ ವಿವರಣೆ ಕೇಳುತ್ತೇನೆ. ಆನಂತರವಷ್ಟೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಮಾಜಿ ಸಂಸದ, ಸಚಿವ ಧನಂಜಯಕುಮಾರ್‌ ಅವರನ್ನು ಪಕ್ಷ ನಿರ್ಲಕ್ಷಿಸಿಲ್ಲ. ಅವರು ಪಕ್ಷದಲ್ಲಿ ಮುಂದುವರಿಯಲಿದ್ದಾರೆ. ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಅವರು ಸಮರ್ಥಿಸಿಕೊಂಡರು.

(ಯುಎನ್‌ಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more