ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

86ಸಲ ಸೋತ ‘ಹೊಟ್ಟೆ ’ ನಾಯಕ ರಂಗಸ್ವಾಮಿ ಇನ್ನಿಲ್ಲ

By Staff
|
Google Oneindia Kannada News

ಬೆಂಗಳೂರು : ಸೋಲಿನಲ್ಲೇ ಸಿಹಿಯನ್ನುಂಡ ಹೊಟ್ಟೆ ಪಕ್ಷದ ರಂಗಸ್ವಾಮಿ ನಿಧನರಾಗಿದ್ದಾರೆ.ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಮೂರು ತಿಂಗಳಿನಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು.

37 ವರ್ಷದ ರಾಜಕೀಯ ಜೀವನದಲ್ಲಿ ರಂಗಸ್ವಾಮಿಯವರು ಒಟ್ಟು 86 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಹಾರ ಕೊರತೆ, ಬಡಜನರ ಬಗ್ಗೆ ಕಾಳಜಿಯಿಂದ ಹೊಟ್ಟೆ ಹೆಸರಿನಲ್ಲೇ ಪಕ್ಷವೊಂದನ್ನು ಅರಂಭಿಸಿ, ಸತತ ಸೋಲಿನ ಸರಮಾಲೆಯನ್ನು ಉಂಡ ಇವರಿಗೆ ಗಿನ್ನಿಸ್‌ ಪ್ರಶಸ್ತಿಯೂ ಲಭಿಸಿತ್ತು.

ರಂಗಸ್ವಾಮಿಯವರ ಪ್ರಮುಖ ಸೋಲುಗಳು!!

  • 1967ರಲ್ಲಿ ಕೆಂಗಲ್‌ ಹನುಮಂತಯ್ಯ ವಿರುದ್ಧ.
  • ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ ವಿರುದ್ಧ.
  • ರಾಜೀವ್‌ ಗಾಂಧಿ ಹಾಗೂ ಪಿ.ವಿ. ನರಸಿಂಹರಾವ್‌ ವಿರುದ್ಧ.
  • 2004ರಲ್ಲಿ ಅನಂತ್‌ ಕುಮಾರ್‌ ವಿರುದ್ಧ.
  • 2004ರಲ್ಲಿ ಕೊನೆಯ ಬಾರಿಗೆ ಎಸ್‌.ಎಂ. ಕೃಷ್ಣ ವಿರುದ್ಧ .
(ದಟ್ಸ್‌ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X