ವಿಮರ್ಶಕರ ಸರಿ-ತಪ್ಪುಗಳ ತಕ್ಕಡಿಯಲ್ಲಿ ತೇಜಸ್ವಿ ಕತೆಗಳು!

Posted By:
Subscribe to Oneindia Kannada


Poornachandra Tejaswiಬೆಂಗಳೂರು : ‘ನಿಸರ್ಗ ಮತ್ತು ಮಾನವನ ನಡುವಿನ ಸಂಬಂಧದ ಶೋಧದಲ್ಲಿ ಪೂರ್ಣಚಂದ್ರ ತೇಜಸ್ವಿ ತೊಡಗಿದ್ದಾರೆ. ಜೀವ ಜಗತ್ತಿನ ರಹಸ್ಯವನ್ನು ಬೇಧಿಸುತ್ತಾ, ಎಲ್ಲರನ್ನು ನಿಸರ್ಗದ ಕೌತುಕ ಜಗತ್ತಿಗೆ ಕರೆದೊಯ್ಯುತ್ತಾರೆ’

-ಹೀಗೆ ಹಿರಿಯ ವಿಮರ್ಶಕ ಕಿ.ರಂ. ನಾಗರಾಜ ಅಭಿಪ್ರಾಯಪಟ್ಟಿದ್ದಾರೆ. ಸಮುದಾಯ ಮತ್ತು ಕಾವ್ಯ ಮಂಡಲ ಸಂಯುಕ್ತವಾಗಿ ಅಯೋಜಿಸಿದ್ದ ‘ತೇಜಸ್ವಿ ಕಥನ ಸಾಹಿತ್ಯ ವಿಚಾರ ಸಂಕಿರಣ’ದಲ್ಲಿ ಅವರು ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ತೇಜಸ್ವಿಯವರ ಕರ್ವಾಲೋ, ಮಾಯಾಲೋಕ, ಪರಿಸರದ ಕಥೆಗಳು, ಜುಗಾರಿಕ್ರಾಸ್‌, ಕಿರಗೂರಿನ ಗಯ್ಯಾಳಿಗಳು ಮುಂತಾದ ಕೃತಿಗಳ ಬಗ್ಗೆ ವಿಮರ್ಶೆ ನಡೆಯಿತು.

ಹಿರಿಯ ವಿಮರ್ಶಕ ಕಿ.ರಂ. ನಾಗರಾಜ ಅವರ ಜೊತೆಗೆ ಅಶಾದೇವಿ, ಕೆ.ಸಿ. ಶಿವಾರೆಡ್ಡಿ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಚರ್ಚೆಯಲ್ಲಿ ಮೂಡಿದ ಒಟ್ಟು ಅಭಿಪ್ರಾಯ :

  • ತೇಜಸ್ವಿಯವರದು ಯಾವ ಸಿದ್ಧಾಂತಕ್ಕೂ ಕಟ್ಟಿಬೀಳದ, ಯಾವ ಸಿದ್ಧಾಂತವನ್ನೂ ತಿರಸ್ಕರಿಸದ ವಿಶಿಷ್ಟ ವಾದ ಸಾಹಿತ್ಯ.
  • ತೇಜಸ್ವಿ ಅವರ ಕೃತಿಗಳು ಸಾಮಾಜಿಕ ಹಾಗೂ ರಾಜಕೀಯ ಬದುಕಿನ ನೈಜ ಚಿತ್ರಣ ನೀಡುತ್ತದೆ.
  • ಬದುಕಿನ ವಿಸ್ಮಯ ಸಂಗತಿಗಳನ್ನು ಹೇಳುತ್ತಾ ಎಲ್ಲರನ್ನು ಒಂದು ಬಗೆಯ ಹಿತಕರವಾದ ಚಿಂತನೆಗೆ ತೇಜಸ್ವಿ ಈಡುಮಾಡುತ್ತಾರೆ.
  • ಶ್ರೀಸಾಮಾನ್ಯನ ಬದುಕಿನ ಸೂಕ್ಷ್ಮ ನೆಲೆಯನ್ನು ವಿವರಿಸುತ್ತಾ, ಮಾನಸಿಕ ಕೌರ್ಯದ ಬಗ್ಗೆ ತೇಜಸ್ವಿ ವ್ಯಾಖ್ಯಾನ ನೀಡುತ್ತಾರೆ.
(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ