ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಎಂ-ಬಿಯಲ್ಲಿ ಅಚ್ಚರಿ!! ಹುಡುಗರದೇ ಮೇಲುಗೈ

By Staff
|
Google Oneindia Kannada News

ಬೆಂಗಳೂರು : ಎಸ್‌ಎಸ್‌ಎಲ್‌ಸಿ ಇರಲಿ ಅಥವಾ ಪಿಯೂಸಿ ಪರೀಕ್ಷೆ ಇರಲಿ ಎಲ್ಲದರಲ್ಲೂ ಹುಡುಗಿಯರೇ ಮೇಲುಗೈ ಸಾಧಿಸುತ್ತ ಬಂದಿದ್ದಾರೆಂಬುದು ಸರ್ವವಿದಿತ.

ಅದರೆ ಅಚ್ಚರಿಯ ವಿಷಯವೆಂದರೆ, ಉನ್ನತ ವ್ಯಾಸಂಗಕ್ಕಾಗಿ ನಡೆಸಲಾಗುವ ಕಾಮನ್‌ ಅಪ್ಟಿಟ್ಯುಡ್‌ ಟೆಸ್ಟ್‌ (ಕ್ಯಾಟ್‌) ಪರೀಕ್ಷೆ ಯನ್ನು ಈ ಬಾರಿ ಕೇವಲ ಶೇ.24.7ರಷ್ಟು ವಿದ್ಯಾರ್ಥಿನಿಯರು ತೆಗೆದುಕೊಂಡಿದ್ದರು. ಅದರಲ್ಲಿ ಶೇ. 17.18 ಜನರನ್ನು ಮಾತ್ರ ಮುಂದಿನ ಸುತ್ತಿಗೆ ಅಯ್ಕೆ ಮಾಡಲಾಗಿದೆ.

ವಿದ್ಯಾರ್ಥಿಗಳ ವಿಷಯಕ್ಕೆ ಬಂದರೆ, ಶೇ.75.29ರಷ್ಟು ಜನ ಪರೀಕ್ಷೆ ಬರೆದವರಲ್ಲಿ ಶೇ.82.82ರಷ್ಟು ಮಂದಿ ಮೊದಲ ಸುತ್ತನ್ನು ದಾಟಿದ್ದಾರೆ.

ಈ ಬಾರಿ ಪರೀಕ್ಷೆ ಬರೆದವರಲ್ಲಿ ಶೇ. 43 ರಷ್ಟು ಮಂದಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಮುಂದಿನ ಸುತ್ತು ಪ್ರವೇಶಿಸಿದ್ದಾರೆ. ಅಭ್ಯರ್ಥಿಗಳು ಕ್ಯಾಟ್‌ ಪರೀಕ್ಷೆಯಲ್ಲಿ ಪಡೆದ ಅಂಕ ಗಳು ಹಾಗೂ ವೃತ್ತಿಯಲ್ಲಿನ ಅನುಭವದ ಅಧಾರದ ಮೇಲೆ ಸಂದರ್ಶನ ನಡೆಸಲಾಗುವುದು ಎಂದು ಬೆಂಗಳೂರಿನ ಐಐಎಂನ ಅಧಿಕಾರಿಗಳು ಹೇಳಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X