ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12.20 ಕೋಟಿ ರೂ. ಅಸ್ತಿ ವಶ: ಬಿಡಿಎಗೆ ಭರ್ಜರಿ ಬೇಟೆ

By Staff
|
Google Oneindia Kannada News

ಬೆಂಗಳೂರು : ಅನಧಿಕೃತವಾಗಿ ಭೂಮಿ ಕಳಬಳಿಸುತ್ತಿರುವವರ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಶುಕ್ರವಾರ ಸುಮಾರು 12.20 ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡಿದೆ.

ನಗರದ ಕೆಂಪಾಪುರ ಅಗ್ರಹಾರದ 20 ಎಕರೆ ಭೂ ಪ್ರದೇಶದಲ್ಲಿ ಬಾಪೂಜಿ ಬಿಲ್ಡಿಂಗ್‌ ಕೋ-ಅಪರೇಟಿವ್‌ ಸೊಸೈಟಿ ನಿರ್ಮಿಸಿದ್ದ ಖಾಸಗಿ ಬಡಾವಣೆಯ ಕೆಲಭಾಗವನ್ನು ಬಿಡಿಎ ನೆಲ ಸಮಗೊಳಿಸಿದೆ.

ಸುಮಾರು 1 ಎಕರೆ 11 ಗುಂಟ ವಿಸ್ತೀರ್ಣದ ಭೂಮಿಯನ್ನು ವಶಪಡೆಸಿಕೊಳ್ಳಲಾಗಿದೆ. ಸೈಟ್‌ ನಂ. 354 ರಿಂದ 359 ರವರೆಗೂ ಅನಧಿಕೃತ ದಾಖಲೆಯನ್ನು ಸೊಸೈಟಿ ಹೊಂದಿತ್ತು . ನಾಗರೀಕರು ಸೈಟ್‌ ಖರೀದಿಗೆ ಮುಂಚೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವುದು ಒಳ್ಳೆಯದು ಎಂದು ಬಿಡಿಎಯ ಅಧಿಕಾರಿಗಳು ಹೇಳಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X