ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಸಿಬಿ ಪೊಲೀಸರ ಬಲೆಗೆ ಮತ್ತೆ 5 ಭಯೋತ್ಪಾದಕರು!

By Staff
|
Google Oneindia Kannada News

ಬೆಂಗಳೂರು : ಶುಕ್ರವಾರವಷ್ಟೇ ಇಮ್ರಾನ್‌ ಎನ್ನುವ ಉಗ್ರನನ್ನು ಬಂಧಿಸಿದ್ದ ನಗರ ಪೊಲೀಸರು, ಶನಿವಾರ ಬೆಳಗ್ಗೆ ಇನ್ನೂ ಐವರು ಉಗ್ರರನ್ನು ಬಂಧಿಸಿದ್ದಾರೆ.

ಈ ಮಧ್ಯೆ ಬಂಧಿತನಾಗಿರುವ ಶಂಕಿತ ಉಗ್ರ ಇಮ್ರಾನ್‌ ಅಲಿಯಾಸ್‌ ಬಿಲಾಲ್‌ನನ್ನು 15ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ. ತನಿಖೆಗೆ ಪೂರಕವಾಗಲು ಎಸ್‌ಜೆಎಂ ನ್ಯಾಯಾಲಯ ಈ ನಿರ್ದೇಶನ ನೀಡಿದೆ.

ಶನಿವಾರ ಬಂಧಿಸಲಾಗಿರುವ ವ್ಯಕ್ತಿಗಳನ್ನು ಇಮ್ರಾನ್‌ ಸಹಚರರು ಎನ್ನಲಾಗಿದೆ. ಇಮ್ರಾನ್‌ ಪಾಕಿಸ್ತಾನದ ಲಷ್ಕರ್‌-ಇ-ತೋಯಿಬಾದ ನಾಯಕ, ಆತನ ಪತ್ನಿ ಕಾಶ್ಮೀರದಲ್ಲಿದ್ದಾಳೆ. ಅಲ್ಲದೇ ಆತನ ಸಹೋದರ ಸರ್ಕಾರಿ ನೌಕರ ಎನ್ನುವ ವಿವರಗಳು ತಿಳಿದು ಬಂದಿವೆ. ತನಿಖೆಗಾಗಿ ಪೊಲೀಸ್‌ ತಂಡ ಕಾಶ್ಮೀರಕ್ಕೆ ತೆರಳಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X