ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಂಟೆಸ್ಸರಿ ಶಿಕ್ಷಣ ಪದ್ಧತಿಗೀಗ ಬರೋಬ್ಬರಿ 100 ವರ್ಷ

By Staff
|
Google Oneindia Kannada News

ಬೆಂಗಳೂರು : ‘ಮಕ್ಕಳಿಗೆ ಬೇಕಾಗಿರುವುದು ಮಾರ್ಗದರ್ಶನ ಮಾತ್ರ, ಸಹಾಯ ಅಥವಾ ಶಿಕ್ಷೆ ಅಲ್ಲ ’ ಎಂಬ ಮೂಲ ಮಂತ್ರದ ಅಧಾರದ ಮೇಲೆ ಪ್ರಾರಂಭವಾದ ಮೊಂಟೆಸ್ಸರಿ ವ್ಯವಸ್ಥೆಗೆ ಈಗ ಶತಮಾನೋತ್ಸವದ ಸಂಭ್ರಮ.

ಈ ಹಿನ್ನೆಲೆಯಲ್ಲಿ ಮಕ್ಕಳ ವಿಕಸನ ಅಧಾರಿತ ಕೇಂದ್ರಗಳು, ನಗರದ ಜೆ.ಎನ್‌. ಟಾಟಾ ಅಡಿಟೋರಿಯಂನಲ್ಲಿ ‘ಮೊಂಟೆಸ್ಸರಿ ಕಾಂಗ್ರೆಸ್‌ 2007’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಜನವರಿ 5 ರಿಂದ 7ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಕಾನೂನು, ಮಕ್ಕಳು ಹಾಗೂ ಸಂಸ್ಕೃತಿ ಮುಂತಾದ ವಿಷಯದ ಮೇಲೆ ವಿಚಾರಗೋಷ್ಠಿ ಇರುತ್ತದೆ.

ಏನಿದು ಮೊಂಟೆಸ್ಸರಿ? : ಮರಿಯಾ ಮೊಂಟೆಸ್ಸರಿ 1907ರಲ್ಲಿ ರೋಮ್‌ನಲ್ಲಿ ಸ್ಲಮ್‌ ಹುಡುಗರಿಗಾಗಿ ಹೌಸ್‌ ಅಫ್‌ ಚಿಲ್ಡ್ರನ್‌ ಪ್ರಾರಂಭಿಸಿದರು. ನಂತರ ಮರಿಯಾ 1939ರಲ್ಲಿ ಭಾರತಕ್ಕೆ ಬಂದ ಮರಿಯಾ ಮೊಂಟೆಸ್ಸರಿ, ಶಾಲೆಗಳನ್ನು ತೆರೆದರು. ಅಂದು ಇಲ್ಲಿ ಪ್ರಾರಂಭವಾದ ಮೊಂಟೆಸ್ಸರಿ ಶಿಕ್ಷಣ ವ್ಯವಸ್ಥೆ ಇಂದು ಸಹಾ ಜನಪ್ರಿಯವಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X