• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರ್ಧ ಕುಂಭಮೇಳದ ಮೇಲೆ ಉಗ್ರರ ಕರಿನೆರಳು

By Staff
|

ತ್ರಿವೇಣಿಯಲ್ಲಿ ಸ್ನಾನ ಮಾಡುವುದರಿಂದ ಕೇವಲ ಪಾಪಗಳಲ್ಲ, ಕಾಯಿಲೆ ಕಸಾಲೆಗಳೂ ಗುಣವಾಗುತ್ತದೆ ಎನ್ನುವುದು ನಂಬಿಕೆ. ಜನವರಿ 19ರಂದು ಮೌನಿ ಅಮಾವಾಸ್ಯೆ. ಅಂದು ಅತಿಹೆಚ್ಚು ಅಂದರೆ 2 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ. ಅಲ್ಲದೆ, ಜ. 14, 15 ಮತ್ತು 23ರಂದು ಜನಜಾತ್ರೆ ಹೆಚ್ಚಿರುತ್ತದೆ.

Ardh-Kumbh-Mela (2007) begins in Triveni Sangama-Allahabadಅಲಹಾಬಾದ್‌ : ಭಾರತ ಉಪಖಂಡದಲ್ಲಿ ಜರುಗುವ ಅತ್ಯಂತ ದೊಡ್ಡ ಜಾತ್ರೆ ಕುಂಭಮೇಳ. 2007ರ ಪವಿತ್ರ ಸ್ನಾನದ ಈ ಮೇಳ ಇಂದು(ಆರುವರ್ಷಕ್ಕೊಮ್ಮೆ ಬರುವ ಅರ್ಧ ಕುಂಭ ಮೇಳ -ಬುಧವಾರ ಜ.3) ಆರಂಭವಾಗಿದೆ.

ಗಂಗೆ, ಯಮುನೆ ಮತ್ತು ಗುಪ್ತಗಾಮಿನಿ ಸರಸ್ವತಿಯ ತ್ರಿವೇಣಿ ಸಂಗಮದ ಪ್ರಯಾಗದಲ್ಲಿ ಪವಿತ್ರ ಸ್ನಾನದ ದಿನಗಳಲ್ಲಿ ಭಾರೀ ಜಾತ್ರೆಯೇ ನೆರೆಯುತ್ತದೆ. ಅದು ಭೂಮಿಯ ಮೇಲಿನ ಅತ್ಯಂತ ದೊಡ್ಡ ಜನಜಾತ್ರೆಯೆಂದರೂ ಆದೀತು.

ಇಂದಿನಿಂದ ಆರಂಭಗೊಂಡಿರುವ ಅರ್ಧ ಕುಂಭ ಮೇಳ 42 ದಿನಗಳ ಕಾಲ ನಡೆಯುತ್ತದೆ. ಈ ಅವಧಿಯಲ್ಲಿ ಸುಮಾರು ಆರೇಳು ಕೋಟಿ ಜನ ಇಲ್ಲಿಗೆ ಆಗಮಿಸುತ್ತಾರೆ. ಇಂದು ಮಧ್ಯಾನ್ಹ 12 ಗಂಟೆಯ ವೇಳೆಗೆ 15 ಲಕ್ಷ ಜನ ತ್ರಿವೇಣಿಗೆ ಇಳಿದಿದ್ದರು ಎಂದು ವರದಿಗಳು ಬಂದಿವೆ.

ತ್ರಿವೇಣಿಯಲ್ಲಿ ಸ್ನಾನ ಮಾಡುವುದರಿಂದ ಕೇವಲ ಪಾಪಗಳಲ್ಲ, ಕಾಯಿಲೆ ಕಸಾಲೆಗಳೂ ಗುಣವಾಗುತ್ತದೆ ಎನ್ನುವುದು ನಂಬಿಕೆ. ಜನವರಿ 19ರಂದು ಮೌನಿ ಅಮಾವಾಸ್ಯೆ. ಅಂದು ಅತಿಹೆಚ್ಚು ಅಂದರೆ 2 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ. ಅಲ್ಲದೆ, ಜ. 14, 15 ಮತ್ತು 23ರಂದು ಜನಜಾತ್ರೆ ಹೆಚ್ಚಿರುತ್ತದೆ.

ಆ ದಿನಗಳಲ್ಲಿ ಸ್ನಾನ ಘಟ್ಟಕ್ಕೆ ಆಗಮಿಸುವವರ ಸಂಖ್ಯೆ ನಗರದ ಜನಸಂಖ್ಯೆಯ ಹಲವು ಪಟ್ಟಿಗಿಂತ ಹೆಚ್ಚಿರುತ್ತದೆ. ಆಡಳಿತ ಹೊರೆ ಹೊತ್ತವರಿಗಂತೂ ಈ ಅಪಾರ ಸಂಖ್ಯೆಯ ಮಂದಿಯನ್ನು ನಿಯಂತ್ರಿಸುವುದು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸವಾಲಿನ ಕೆಲಸ.

ಮುಲಭೂತ ಸೌಕರ್ಯ ಹೇಗೂ ನಡೆದೀತು. ಆದರೆ, ಈ ಬಾರಿ ಭಯೋತ್ಪಾದನೆಯ ಕರಿನೆರಳು ಕುಂಭಮೇಳದ ಮೇಲೆ ಬಿದ್ದಿದೆ. ಅಂತೆಯೇ, ತ್ರಿವೇಣಿ ಸಂಗಮದಲ್ಲಿ ಹಿಂದೆಂದೂ ಕಾಣದಷ್ಟು ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಪರಿಸ್ಥಿತಿಯನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ ಎಂದು ಪೋಲೀಸ್‌ ಮುಖ್ಯಸ್ಥ ರಾಜೀವ್‌ ಸಭರ್‌ವಾಲ್‌ ತಿಳಿಸಿದ್ದಾರೆ.

ಕುಂಭಮೇಳದ ನಿಗದಿತ ದಿನಗಳಲ್ಲಿ ತ್ರಿವೇಣಿ ಸಂಗಮದಲ್ಲಿ ಮೀಯುವುದರಿಂದ ಎಲ್ಲಾ ಪಾಪಗಳು ತೊಳೆದುಹೋಗುತ್ತವೆ ಅನ್ನುವ ನಂಬಿಕೆ ಭಕ್ತರದು. ತೊಳೆದು ಹೋಗಲಿ. ಅದಕ್ಕೆಂದೇ ಆ ದಿನಗಳಲ್ಲಿ 3 ರಿಂದ 30 ಮಿಲಿಯನ್‌ ಜನ ಅಲ್ಲಿರುತ್ತಾರೆ. ಈ ಎಲ್ಲಾ ತಲೆ ನೋವನ್ನು ನಿಭಾಯಿಸುವ ಹೊತ್ತಿಗೆ ಉತ್ತರಪ್ರದೇಶ ಸರ್ಕಾರಕ್ಕೆ ಸಾಕು ಸಾಕಾಗಿರುತ್ತದೆ. ಇನ್ನು ಜಿಲ್ಲಾಡಳಿತದ ಪಾಡಂತೂ ಕತ್ತಿಯ ಸಾಮು ಮಾಡುವಷ್ಟು ಸೂಕ್ಷ್ಮವಾದುದು.

ಕಟ್ಟೆಚ್ಚರ : ಕುಂಭಮೇಳದ ಸಿದ್ಧತೆಗಾಗಿಯೇ ಬಿಲಿಯಗಟ್ಟಳೆ ರುಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಪತ್ರಿಕೆಯಾಂದು ವರದಿ ಮಾಡಿರುವ ಪ್ರಕಾರ - ಜಾತ್ರೆಗೆಂದೇ ವಿಶೇಷವಾಗಿ 4000 ಎಕರೆ ಪ್ರದೇಶ ಅಣಿಯಾಗಿದೆ. ಅದೇ ಕುಂಭನಗರ. ಈ ಪ್ರದೇಶದಲ್ಲಿ ಲಕ್ಷೋಪಲಕ್ಷ ಲೀಟರ್‌ ನೀರು ಪೂರೈಸುವ ಸಾವಿರಾರು ಸಾವಿರ ನಲ್ಲಿಗಳಿವೆ. 25 ಮೆಗಾವ್ಯಾಟ್‌ ವಿದ್ಯುತ್‌ ಪೂರೈಸುವ 35 ಉಪಕೇಂದ್ರಗಳನ್ನು ಹಬ್ಬಕ್ಕೆಂದೇ ರೂಪಿಸಲಾಗಿದೆ. ಸಾವಿರಾರು ಬೀದಿ ದೀಪಗಳು ಬೆಳಗುತ್ತಿವೆ. ವ್ಯವಸ್ಥೆಗಳನ್ನು ಬಣ್ಣಿಸುವುದು ಕಷ್ಟ. ಒಮ್ಮೆ ಕುಂಭ ಮೇಳಕ್ಕೆ ಹೋಗಿಬರಬೇಕು. ನಿಮಗೆ ಆಸಕ್ತಿ ಉಂಟೋ?

ಇನ್ನು ಕುಂಭಮೇಳಕ್ಕೆಂದೇ ವಿಶೇಷ ದೂರವಾಣಿ ಸಂಪರ್ಕಗಳು, ದೂರವಾಣಿ ಕೇಂದ್ರಗಳು, ರಸ್ತೆಗಳು ಸಿದ್ಧವಾಗಿರುತ್ತವೆ. ಕುಂಭನಗರದ ವ್ಯವಸ್ಥೆ ನಾನಾ ವಿಭಾಗಗಳಲ್ಲಿ ಹಂಚಿಕೆಯಾಗಿದ್ದು ಉಳಿದಂತೆ ಆರೋಗ್ಯ, ನೀರು, ವಿದ್ಯುತ್‌ಗಳು ಪ್ರತ್ಯೇಕ ನಿರ್ವಹಣಾ ಕಚೇರಿಗಳನ್ನು ಹೊಂದಿರುತ್ತವೆ. ಭದ್ರತಾ ವ್ಯವಸ್ಥೆಯ ಬಗ್ಗೆ ಹೇಳುವುದಾದರೆ ಸಾವಿರಾರು ಪೊಲೀಸರು, ಗಡಿಭದ್ರತಾ ಪಡೆ, ಕೇಂದ್ರ ಮೀಸಲು ಪಡೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಶಾಂತಿ ರಕ್ಷಣಾ ಕಾರ್ಯದಲ್ಲಿ ವ್ಯಸ್ತರಾಗಿದ್ದಾರೆ.

ಚೀನಾದ ಯಾತ್ರಿಕ ಹ್ಯೂಯನ್‌ ತ್ಸಾಂಗ್‌ ಭಾರತ ಪ್ರವಾಸ ಕಾಲದಲ್ಲಿ - ಹರ್ಷವರ್ಧನನ ಆಳ್ವಿಕೆಯಲ್ಲಿ (ಕ್ರಿ.ಶ.629 ರಿಂದ 645) ತಾನು ಕಂಡ ಮಹಾಕುಂಭಮೇಳವನ್ನು ಬಣ್ಣಿಸಿದ್ದಾನೆ. 8 ದಿನಗಳ ಉತ್ಸವದಲ್ಲಿ ಭಾಗವಹಿಸಿದ ಸಾಧು ಸನ್ಯಾಸಿಗಳ ಸಂಖ್ಯೆಯನ್ನು ಕಂಡು ಅವನಿಗೆ ಭಾರೀ ಅಚ್ಚರಿ. ಅವನು ಹೇಳುವ ಪ್ರಕಾರ -ಬುದ್ಧ, ಜಿನ, ಈಶ್ವರ, ಸೂರ್ಯ ಎಲ್ಲರಿಗೂ ಅಲ್ಲಿ ಪೂಜೆ. ಇದು ಭಾರತ.

(ದಟ್ಸ್‌ ಕನ್ನಡ ಸುದ್ದಿಮನೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more