• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾರಾಯಿ ನಲ್ಲಿ ಬಂದ್‌: ಹಾವಿನಹುತ್ತಕ್ಕೆ ಯಡಿಯೂರಪ್ಪ ಕೈ!

By Super
|

ಇನ್ನುಮುಂದೆ ನಲ್ಲಿಯಲ್ಲಿ ಸಾರಾಯಿ ಬರುವುದನ್ನು ಬಂದ್‌ ಮಾಡೋಣ ಎಂದು ಕರ್ನಾಟಕ ಸರಕಾರ ಹೇಳುತ್ತಿದೆ. ಸಾಧ್ಯತೆ ಮತ್ತು ಬಾಧ್ಯತೆಗಳ ಚರ್ಚೆ ಸಾಗಲಿ.....ಹೊಸ ವರ್ಷದ ಸಂದರ್ಭದಲ್ಲಿ ಒಬ್ಬೊಬ್ಬರು ಒಂದೊಂಥರ ನಿರ್ಣಯಗಳನ್ನು ತೆಗೆದುಕೊಳ್ಳುವುದು ವಾಡಿಕೆ. ಜನವರಿ 1ನೆ ತಾರೀಕಿನಿಂದ ಬೀಡಿ ಸಿಗರೇಟು ಸೇದಲ್ಲ, ಹೆಂಡ ಸಾರಾಯಿ ಮುಟ್ಟಲ್ಲ. ಬೆಳಗ್ಗೆ ಬೇಗ ಏಳ್ತೀನಿ. ವಾಕಿಂಗ್‌ ಹೋಗ್ತೀನಿ. ಮಕ್ಕಳಿಗೆ ನಾನೇ ಪಾಠ ಹೇಳ್‌ಕೊಡ್ತೀನಿ, ನಾನೂ ಅಡುಗೆ ತಿಂಡಿ ಮಾಡ್ತೀನಿ, ಬಟ್ಟೆ ಇಸ್ತ್ರಿ ಮಾಡ್ತೀನಿ, ಟೈಂ ವೇಸ್ಟ್‌ ಮಾಡಲ್ಲ. ಪೈಸೆಗೆ ಪೈಸಾ ಕೂಡಿಡ್ತೀನಿ. ದುಂದು ವೆಚ್ಚ ಮಾಡಲ್ಲ. ಕೂಡಿಟ್ಟ ಹಣದಲ್ಲಿ ಮನೆ ಕಟ್ತೀನಿ, ಮಕ್ಕಳಿಗೆ ಕನ್ನಡ ಕಲಿಸ್ತೀನಿ, ಆಫೀಸು ಕೆಲಸ ಜಾಸ್ತಿ ಮಾಡ್ತೀನಿ, ಕಂಪನಿಯಲ್ಲಿ ದೊಡ್ಡ ಹುದ್ದೆಗೆ ಏರ್ತೀನಿ, ಗಂಡನಿಗೆ ಕಿರಿಕಿರಿ ಮಾಡೊದನ್ನ ಇವತ್ತಿನಿಂದಲೇ ಬಿಡ್ತೀನಿ, ಅಪ್ಪಅಮ್ಮನ್ನ ಕಣ್ಣಲ್ಲಿ ಕಣ್ಣಿಟ್ಟು ಸಾಕ್ತೀನಿ. ಒಳ್ಳೆ ಮನ್ಷ್ಯ ಆಗ್ತೀನಿ.

ಹೀಗಿರುತ್ತವೆ ಕೆಲವು ನಿರ್ಣಯಗಳು.. ಆದರೆ ನಮ್ಮ ಉಪಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಕೈಗೊಂಡಿರುವ ನಿರ್ಣಯ ಅಂತಿಂಥ ನಿರ್ಣಯವಲ್ಲ. ಇಡೀ ಕರ್ನಾಟಕವನ್ನೇ ಬದಲುಮಾಡುವ ಕ್ರಾಂತಿಕಾರಕ ನಿರ್ಧಾರ ಕೈಗೊಳ್ಳುವುದಕ್ಕೆ ಯೋಚನೆ ಮಾಡಿದ್ದಾರೆ. ನಾಗರಹಾವಿನ ಹುತ್ತಕ್ಕೇ ಕೈಹಾಕಿದ್ದಾರೆ.. ಇಂಥ ಸಾಹಸಿ ಮನಸ್ಸು ಕೇವಲ ಅವರದ್ದೇ ಅಲ್ಲ. ಮೈತ್ರಿ ಸರಕಾರದ್ದು. ನಿಮ್ಮದು ಮತ್ತು ನಮ್ಮದು !

ಹೆ...ಹೆಹೆ...ಇದೆಲ್ಲಾದರೂ ಉಂಟಾ ? ಆಗಲ್ಲ ಹೋಗಲ್ಲ ಎಂದು ಕೆಲವರು ಸಿನಿಕರು ನಗೆಯಾಡುತ್ತಿದ್ದಾರೆ.. ಪಾಸಿಟಿವ್‌ ಆಗಿ ಚಿಂತಿಸುವವರು ಮತ್ತು ಪುರೋಗಾಮಿಗಳಿಗೆ ಮಾತ್ರ ಇಲ್ಲಿ ಪ್ರವೇಶ!

..ಮುಂದಿನ ವರ್ಷದಿಂದ ರಾಜ್ಯದಲ್ಲಿ ಸಾರಾಯಿ ನಿಷೇಧ, ಹ್ಯಾಂಗೋವರ್‌ ನಿಷೇಧ!! ಮಾಡೋಣ ಅಂತ ಯಡಿಯೂರಪ್ಪ ಹೇಳುತ್ತಾರೆ. ಅಬಕಾರಿಯಷ್ಟು ದೊಡ್ಡ ಉದ್ಯಮ ಕರ್ನಾಟಕದಲ್ಲಿ ಇನ್ನೊಂದಿಲ್ಲ. ನಮ್ಮ ಕಣ್ಣಿಗೆ ಕಾಣ್ಸಲ್ಲ ಅಷ್ಟೆ. ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕುಯಿದು ಯಾರಾದರೂ ಸಾಂಬಾರ್‌ ಮಾಡ್ತಾರಾ? ಆಗತ್ತೋ ಬಿಡತ್ತೋ ಅಂತೂ ಮುತ್ತಿನಂಥ ಒಂದು ಮಾತನ್ನು ಯಡ್ಡಿ ಹೊಸ ವರ್ಷದ ಮುನ್ನಾದಿನ ಆಡಿದ್ದಾರೆ. ದೇವರಾಣೆ ಅವರು ಕುಡಿದ ಅಮಲಿನಲ್ಲಿ ಇಂಥ ಹೇಳಿಕೆ ಕೊಟ್ಟಿಲ್ಲ . ಅವರಿಗೆ ಹೊಸ ವರ್ಷದ ಶುಭಾಶಯಗಳು.

ಈ ಬಗೆಯ ನಿರ್ಧಾರಗಳನ್ನು ಗುಜರಾತ್‌ ಮತ್ತು ತಮಿಳುನಾಡು ಕೈಗೊಂಡಿತ್ತು. ಕರ್ನಾಟಕದಲ್ಲಿ ಈರೀತಿ ಯೋಚಿಸುವುದು ಕೂಡ ತಪ್ಪು ಎಂದು ಕೆಸಿಎನ್‌ ರೆಡ್ಡಿಯಿಂದ ಎಚ್‌.ಡಿ. ಕುಮಾರಸ್ವಾಮಿಯತನಕ ಎಲ್ಲ ಸರಕಾರಗಳು ಭಾವಿಸಿದ್ದವು. ಸಾರಾಯಿಗೆ ಬೈಬೈ ಹೇಳುವುದು ಇಂಪಾಸಿಬಲ್‌ ಎಂದು ಪ್ರಜೆಗಳು-ಪ್ರಭುಗಳು ಅಂದು ಕೊಂಡಿದ್ದರು. ಈಗಲೂ ಹಾಗೇ ಅಂದುಕೊಂಡಿದ್ದಾರೆ.

ಸಾರಾಯಿ ನಿಷೇಧ ಕುರಿತು ಯಡ್ಡಿಯವರ ಕೆಲವು ಚಿಂತನೆಗಳು ಹೀಗಿವೆ :

ಮಹಿಳೆಯರು ಸಾರಾಯಿಯನ್ನು ನಿಷೇಧಿಸುವಂತೆ ಆಗ್ರಹಿಸುತ್ತಲೇ ಬಂದಿದ್ದಾರೆ.

ಕಳ್ಳಭಟ್ಟಿ, ಅಂದರೆ ಇಲ್ಲಿಸಿಟ್‌ ಆಲ್‌ಕೊಹಾಲ್‌ ದಂಧೆ ವಿಪರೀತವಾಗಿದೆ

ಸರಕಾರಕ್ಕೆ ಸುಮಾರು 2000 ಕೋಟಿರೂ. ಆದಾಯ ಕಟ್‌ ಆಗ್ತದೆ.

ಆದರೆ, ಆಗಲಿ, ಪಾಪದ ದುಡ್ಡು ನಮಗೆ ಬೇಡ.

ಯಾವುದಕ್ಕೂ ಎಲ್ಲರೂ ಕುಳಿತು ಮಾತಾಡೋಣ, ಇತ್ಯರ್ಥ ಮಾಡೋಣ.

ಸಾರಾಯಿ ನಿಷೇಧ ಜಾರಿಗೆ ಬಂದರೆ ಉಂಟಾಗುವ ದುಷ್ಪರಿಣಾಮಗಳತ್ತಲೂ ನಾವು ಒಂದು ನೋಟ ಬೀರಬೇಕು. ಅವು ಹೀಗಿರುತ್ತವೆ.

ಸಾರಾಯಿ ದೂರಹೋದಷ್ಟೂ ಕಳ್ಳಭಟ್ಟಿ ಹತ್ತಿರಬರುತ್ತದೆ

ಸಾಹುಕಾರ್ರು ಬಿಯರು ವಿಸ್ಕಿ ಕುಡಿತಾರೆ, ಬಡವರು ಏನು ಮಾಡಬೇಕು?

ಪರಂಪರಾಗತವಾಗಿ ಸಾರಾಯಿಯನ್ನೇ ನಂಬಿದ ಇಂಡಸ್ಟ್ರಿ ಏನಾಗತ್ತೆ?

2000 ಕೋಟಿ ಆದಾಯಕ್ಕೆ ಖೋತಾ, ಅಂದರೆ ಅದರಲ್ಲಿ 25% ಲಂಚ ಮತ್ತು ನೂರಿನ್ನೂರು ಕೋಟಿ ಚುನಾವಣೆ ನಿಧಿಗೆ ಸಂಚಕಾರ.

ಪಾಪದ ಹಣ ಬೇಡ ಅಂದರೆ ಪುಣ್ಯದ ಹಣ ಇನ್ನೆಲ್ಲಿ ಉಳಿದಿದೆ, ಪ್ರಜೆಗಳ ಕಿಸೆಯೂ ಖಾಲಿಯಾಗಿದೆ.

ಸಾರಾಯಿ ನಿಷೇಧದ ಬಗ್ಗೆ ನಿಮ್ಮ ಅನಿಸಿಕೆಗಳು ಮುಖ್ಯವಾಗುತ್ತವೆ. ಫೀಡ್‌ಬ್ಯಾಕ್‌ ಕೊಡಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka State is Contemplating banning Liquor in The State. A comment on the Pros and Cons of this policy thought.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more